Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಿಜೆಪಿಗೆ ಶಹಜಾದ್ ಪೂನಾವಾಲಾ ರಾಜೀನಾಮೆ

By Anu News
August 17, 2026 1 Min Read
0

ನವದೆಹಲಿ: ತುರ್ತು ಆರ್ಥಿಕ ಹಾಗೂ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ.

ಜುಲೈ 30ರಂದು ಪಕ್ಷದ ಎಲ್ಲಾ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದ ಪೂನಾವಾಲಾ ಅವರ ರಾಜೀನಾಮೆಯನ್ನು ಬಿಜೆಪಿ ಈ ಹಿಂದೆ ಅಂಗೀಕರಿಸಿರಲಿಲ್ಲ. ಇದೀಗ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮಗೊಳಿಸಿರುವುದಾಗಿ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ವಕ್ತಾರ ಹುದ್ದೆ ಹಾಗೂ ಸಕ್ರಿಯ ಪ್ರಾಥಮಿಕ ಸದಸ್ಯತ್ವದಿಂದ ನಿರ್ಗಮಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

ಆರ್ಥಿಕ ಹಾಗೂ ವೈಯಕ್ತಿಕ ಕಾರಣಗಳಿಂದ ಖಾಸಗಿ ವಲಯಕ್ಕೆ ತೆರಳುತ್ತಿರುವುದಾಗಿ ಹೇಳಿರುವ ಅವರು, ಬಿಜೆಪಿ ಮತ್ತು ‘ವಿಕಸಿತ ಭಾರತ’ದ ಗುರಿಗೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.

My dearest friends from media
My loving family & supporters

Reposting the letter is here for your ref.

Thanks for your calls 🫶🙏 https://t.co/Dkqxvr0YFl

— Shehzad Jai Hind (@Shehzad_Ind) August 17, 2026

ತಮ್ಮ ರಾಜಕೀಯ ಪಯಣದಲ್ಲಿ ಬಿಜೆಪಿ ನೀಡಿದ ಅವಕಾಶಗಳನ್ನು ಸ್ಮರಿಸಿದ ಪೂನಾವಾಲಾ, ಪಕ್ಷದ ಸೈದ್ಧಾಂತಿಕ ಬದ್ಧತೆ ತಮ್ಮಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. “ನಾನು ವ್ಯವಸ್ಥೆಯಿಂದ ಹೊರಬರುತ್ತಿದ್ದೇನೆ, ವ್ಯಕ್ತಿ ಅಥವಾ ವಿಚಾರದಿಂದಲ್ಲ” ಎಂದವರು ಹೇಳಿದ್ದಾರೆ.

Author

Anu News

Follow Me
Other Articles
Previous

‘Leaving Vyavastha, not Vichar’: Poonawalla reiterates BJP exit

Next

PM Modi expresses grief over Bihar stampede, assures support to victims

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Food safety: Inspections to cover PGs, hostels too, says UT Khader
    • ಆಹಾರ ಸುರಕ್ಷತೆ; ಹೋಟೆಲ್‌ ಮಾತ್ರವಲ್ಲ, ಪಿಜಿ-ಹಾಸ್ಟೆಲ್‌ಗಳಲ್ಲೂ ತಪಾಸಣೆಗೆ ಯುಟಿ ಖಾದರ್ ಸೂಚನೆ
    • ಬಿಹಾರದ ನೂಕುನುಗ್ಗಲು ದುರಂತದ ಬಗ್ಗೆ ಪ್ರಧಾನಿ ಮೋದಿ ವಿಷಾದ; ಸಂತ್ರಸ್ತರಿಗೆ ಬೆಂಬಲದ ಭರವಸೆ
    • PM Modi expresses grief over Bihar stampede, assures support to victims
    • ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಿಜೆಪಿಗೆ ಶಹಜಾದ್ ಪೂನಾವಾಲಾ ರಾಜೀನಾಮೆ
    Copyright 2026 — ANU News. All rights reserved. Blogsy WordPress Theme