Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಶವ ಪತ್ತೆ; ಕೌಟುಂಬಿಕ ಕಲಹದ ಶಂಕೆ

By ANU News
August 26, 2026 1 Min Read
0

ವಿಜಯಪುರ: ನಗರದ ಹೊರವಲಯದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮಂದಿಯ ಮೃತದೇಹಗಳು ಪತ್ತೆಯಾಗಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಮೃತರಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 24ರಿಂದ ನಾಪತ್ತೆಯಾಗಿದ್ದ ಶೋಭಾ ಜಾಲಗೇರಿ (45) ಮತ್ತು ಅವರ ಐವರು ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಹಾಗೂ ಸಾನಿಕಾ (7) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕೆರೆಯ ಅಂಚಿನಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.

ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author

ANU News

Follow Me
Other Articles
Previous

Asian Games 2026: Cricket Schedule Announced; India Directly Enters Quarterfinals

Next

Six bodies of one family found in Bhootnal Lake; Family dispute suspected

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Mandadi’ teaser out; Suri plays sailor in high-seas adventure
    • ‘ಮಂದಾಡಿ’ ಟೀಸರ್ ಬಿಡುಗಡೆ; ನಾವಿಕನಾಗಿ ಸೂರಿ, ಸಮುದ್ರದಲ್ಲಿ ಸಾಹಸ
    • Telangana bus crashes into container truck; 6 killed, 20 injured
    • ತೆಲಂಗಾಣದಲ್ಲಿ ಬಸ್-ಕಂಟೇನರ್ ಡಿಕ್ಕಿ, 6 ಮಂದಿ ಸಾವು, 20 ಜನರಿಗೆ ಗಾಯ
    • Karnataka minister B Nagendra likely to quit over Valmiki scam allegations
    Copyright 2026 — ANU News. All rights reserved. Blogsy WordPress Theme