Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಅಧಿಕಾರಕ್ಕಿಂತ ಜನರ ನಂಬಿಕೆ ದೊಡ್ಡದು: ಸಿಎಂ ಆಗಿ 100 ದಿನ ಪೂರೈಸಿದ ಡಿಕೆಶಿ

By ANU News
September 10, 2026 2 Min Read
0

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ಬಹಿರಂಗ ಪತ್ರ ಬರೆದಿದ್ದು, ಜನರ ನಂಬಿಕೆ ಮತ್ತು ನಿರೀಕ್ಷೆಗಳೇ ಸರ್ಕಾರದ ಪ್ರಮುಖ ಹೊಣೆಗಾರಿಕೆ ಎಂದು ಹೇಳಿದ್ದಾರೆ.

“ಅಧಿಕಾರಕ್ಕಿಂತ ಜನರ ನಂಬಿಕೆ ದೊಡ್ಡದು. ಜನರ ನಿರೀಕ್ಷೆಗಳ ಮುಂದೆ ಹುದ್ದೆ ಚಿಕ್ಕದು. ನಮ್ಮ ಮುಂದಿರುವ ಸವಾಲು, ಜವಾಬ್ದಾರಿ ಮತ್ತು ಹೊಣೆಗಾರಿಕೆಯೇ ದೊಡ್ಡದು” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಗಟ್ಟಿಯಾದ ಅಡಿಪಾಯ ಹಾಕಿದ್ದಾರೆ. ಸರ್ಕಾರ ಎಲ್ಲರಿಗಾಗಿ ಇರಬೇಕು, ಅದರಲ್ಲೂ ಶೋಷಿತ ಮತ್ತು ದಮನಿತ ವರ್ಗಗಳ ಪರವಾಗಿ ನಿಲ್ಲಬೇಕು ಎಂಬ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಶಿವಕುಮಾರ್‌ ಹೇಳಿದ್ದಾರೆ.

100 ದಿನಗಳಲ್ಲಿ ಹಲವು ಹೆಜ್ಜೆ

ಐದು ಗ್ಯಾರಂಟಿ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ, ನೆಮ್ಮದಿ ಮತ್ತು ಭದ್ರತೆ ನೀಡಿವೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ಸೇರಿದಂತೆ ಹಲವು ಕ್ರಮಗಳನ್ನು ಉಲ್ಲೇಖಿಸಿದ್ದಾರೆ.

₹29,679 ಕೋಟಿ ಮೊತ್ತದ ಹೂಡಿಕೆಗಳಿಗೆ ಅನುಮೋದನೆ ದೊರೆತಿದ್ದು, ಇದರಿಂದ ಸುಮಾರು 66 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು 10 ಸಾವಿರ ಭಾರತ್‌ ಜೋಡೋ ಯುವ ಸಂಘಗಳು, ಸರ್ಕಾರಿ ಪ್ರಾಯೋಜಿತ AI ವಿಶ್ವವಿದ್ಯಾಲಯ ಹಾಗೂ 6ನೇ ತರಗತಿಯಿಂದ AI ಶಿಕ್ಷಣ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮೋಡ ಬಿತ್ತನೆ, ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹಾಗೂ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆಗಾಗಿ ‘ಪ್ರಜಾ ಸೇವೆ’ ಇಲಾಖೆ ಸ್ಥಾಪಿಸಿರುವುದನ್ನೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

‘ಮುಂದಿನ 500 ದಿನಗಳಿಗೆ ದಿಕ್ಕೂಚಿ’

ಈ ಕ್ರಮಗಳನ್ನು ಸಾಧನೆಗಳ ಪಟ್ಟಿಯೆಂದು ಪರಿಗಣಿಸುವುದಿಲ್ಲ. ಮುಂದಿನ ಹಾದಿಗೆ ದಿಕ್ಕೂಚಿಗಳೆಂದು ಭಾವಿಸುತ್ತೇನೆ ಎಂದು ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದ ಅನ್ನದಾತರು ಬರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಆಧುನಿಕವಾಗಿ ದೃಢವಾದ ಕರ್ನಾಟಕ ನಿರ್ಮಾಣವೇ ತಮ್ಮ ಸಂಕಲ್ಪ. ಮುಂದಿನ 500 ದಿನಗಳಲ್ಲಿ ಇದೇ ಬದ್ಧತೆಯೊಂದಿಗೆ ಕೆಲಸ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

“ಕರ್ನಾಟಕ ಅವಕಾಶಗಳಿಗಾಗಿ ಕಾಯುವುದಿಲ್ಲ; ಅವಕಾಶಗಳನ್ನು ಸೃಷ್ಟಿಸುತ್ತದೆ. ನನ್ನ ಉಸಿರಿರುವವರೆಗೂ ಈ ಮಣ್ಣಿನ ಋಣ ತೀರಿಸಲು ಹಾಗೂ ಜನರ ಬದುಕು ಸುಧಾರಿಸಲು ಶ್ರಮಿಸುತ್ತೇನೆ” ಎಂದು ಶಿವಕುಮಾರ್‌ ಪತ್ರದಲ್ಲಿ ಹೇಳಿದ್ದಾರೆ.

Author

ANU News

Follow Me
Other Articles
Previous

Raanbali teaser: Vijay Deverakonda, Rashmika Mandanna film takes on British-era oppression

Next

‘People’s trust is bigger than power’: DK Shivakumar marks 100 days as CM

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Naga Chaitanya’s ‘Vrushakarma’ to hit screens on December 4
    • ನಾಗ ಚೈತನ್ಯ ‘ವೃಷಕರ್ಮ’ ಡಿಸೆಂಬರ್ 4ಕ್ಕೆ ತೆರೆಗೆ
    • ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ UPSCಯಿಂದ ಅರ್ಜಿ ಆಹ್ವಾನ
    • UPSC invites applications for direct recruitment to various government posts
    • ಅರಣ್ಯ ಹಕ್ಕು ಕಾಯ್ದೆ: ಬಾಕಿ ಹಕ್ಕು ಕೋರಿಕೆ ಶೀಘ್ರ ಇತ್ಯರ್ಥಕ್ಕೆ ಕೇಂದ್ರ ಸೂಚನೆ
    Copyright 2026 — ANU News. All rights reserved. Blogsy WordPress Theme