Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

2028ರ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಬೆಂಗಳೂರು ದಕ್ಷಿಣದಲ್ಲಿ ‘ಸಂಘಟನ್ ಸೃಜನ್–2’ ಅಭಿಯಾನಕ್ಕೆ ಚಾಲನೆ

By ANU News
October 15, 2026 2 Min Read
0

ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ನಲ್ಲಿ ‘ಸಂಘಟನ್ ಸೃಜನ್–2’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನಿರ್ದೇಶನದಂತೆ ನಡೆಯುತ್ತಿರುವ ಈ ಅಭಿಯಾನದ ಮೂಲಕ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ಪಕ್ಷದ ಸಂಘಟನೆಯಲ್ಲಿ ಜವಾಬ್ದಾರಿ ನೀಡಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಜಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 24ರಂದು ರಾಜ್ಯದಲ್ಲಿ ಸಂಘಟನ್ ಸೃಜನ್ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಹಲವು ವರ್ಷಗಳಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದವರ ಬದಲಿಗೆ ಕಾರ್ಯಕರ್ತರ ಆಯ್ಕೆಯ ನಾಯಕರಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಅಭಿಯಾನದ ಫಲವಾಗಿ ಹಲವು ಕಡೆಗಳಲ್ಲಿ ಬದಲಾವಣೆಗಳಾಗಿದ್ದು, ಕಾರ್ಯಕರ್ತರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಸಂಘಟನಾತ್ಮಕ ಬದಲಾವಣೆಗಳನ್ನು ಕೈಗೊಳ್ಳಲಾಗಿದೆ. ಇದೀಗ ಎರಡನೇ ಹಂತದ ಅಭಿಯಾನದ ಜವಾಬ್ದಾರಿಯನ್ನು ಮಾಜಿ ಶಾಸಕಿ ಪೂರ್ಣಿಮಾ ಅವರು ಶ್ರೀನಿವಾಸುಲು ಮತ್ತು ತಮಗೆ ವಹಿಸಿದ್ದಾರೆ ಎಂದು ತಿಳಿಸಿದರು.

17 ಬ್ಲಾಕ್‌ಗಳಲ್ಲಿ ಕಾರ್ಯಕರ್ತರ ಗುರುತಿಸುವಿಕೆ

ಅಭಿಯಾನದಡಿ ಬೆಂಗಳೂರು ದಕ್ಷಿಣ ಜಿಲ್ಲೆಯ 17 ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಹಾಗೂ ಆರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಗುರುತಿಸಲಾಗುತ್ತದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಲು ಆಸಕ್ತಿ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ರಾಜಕುಮಾರ್ ಹೇಳಿದರು.

ಮಹಿಳೆಯರಿಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷ ಸ್ಥಾನಗಳನ್ನು ಅಲಂಕರಿಸಲು ಅವಕಾಶ ಕಲ್ಪಿಸಬೇಕು ಎಂಬುದು ಎಐಸಿಸಿಯ ಸೂಚನೆಯಾಗಿದೆ. ಮಹಿಳಾ ಕಾಂಗ್ರೆಸ್‌ನ ಸದಸ್ಯತ್ವಕ್ಕೆ ಮಾತ್ರ ಸೀಮಿತವಾಗದೆ, ಆಸಕ್ತ ಮಹಿಳೆಯರು ಇತರ ಕಾಂಗ್ರೆಸ್ ಸಂಘಟನಾ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಸಮಿತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡ್ಡಾಯವಾಗಿರಬೇಕು ಎಂದು ಸೂಚಿಸಲಾಗಿದೆ ಎಂದರು.

ಈಗಾಗಲೇ ಬ್ಲಾಕ್ ಸಮಿತಿಗಳಲ್ಲಿ ಜವಾಬ್ದಾರಿ ನಿರ್ವಹಿಸಿದವರಿಗೆ ಹೊಸ ಜವಾಬ್ದಾರಿಗಳನ್ನು ನೀಡುವುದು, ವಾರ್ಡ್ ಸಮಿತಿಗಳನ್ನು ಪುನರ್‌ರಚಿಸುವುದು ಸೇರಿದಂತೆ ಹಲವು ಸಂಘಟನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ‘ಬಿಲ್ ಎ–2’ ಅರ್ಜಿಗಳ ಮೂಲಕವೂ ಅಗತ್ಯ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ: ಪೂರ್ಣಿಮಾ

ಮಾಜಿ ಶಾಸಕಿ ಪೂರ್ಣಿಮಾ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಕಾಂಗ್ರೆಸ್‌ನ ಗುರಿಯಾಗಿದೆ. ಇದಕ್ಕಾಗಿ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.

ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಜಿಲ್ಲಾ ಅಧ್ಯಕ್ಷರ ಪ್ರಭಾವದಿಂದ ಮುಕ್ತವಾಗಿ ನಡೆಸುವ ಉದ್ದೇಶವಿದೆ. ಈ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಪ್ರತಿ ಬ್ಲಾಕ್‌ನಲ್ಲಿ ಹಿಂದೆ ಕಾಂಗ್ರೆಸ್‌ಗೆ ಲಭಿಸಿದ್ದ ಮತಗಳ ಪ್ರಮಾಣ, ಪ್ರಸ್ತುತ ಪಕ್ಷದ ಬೆಂಬಲ ಹಾಗೂ ಸ್ಥಳೀಯ ರಾಜಕೀಯ ಪರಿಸ್ಥಿತಿಯನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಬ್ಲಾಕ್ ಅಧ್ಯಕ್ಷರಿಗೆ ತಮ್ಮ ವ್ಯಾಪ್ತಿಯ ವಾಸ್ತವ ಸ್ಥಿತಿಗತಿಯ ಅರಿವಿರಬೇಕು. ಜನರೊಂದಿಗೆ ಬೆರೆತು ಕೆಲಸ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಬೇಕು ಎಂದು ಪೂರ್ಣಿಮಾ ತಿಳಿಸಿದರು.

Author

ANU News

Follow Me
Other Articles
Previous

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್

Next

ಮೈಸೂರು ದಸರಾ: ಈ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಗಜರಾಜ ‘ಪ್ರಶಾಂತ’

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಕಡಲ ಸಹಕಾರ ಬಲವರ್ಧನೆಗೆ ಭಾರತ–ದಕ್ಷಿಣ ಕೊರಿಯಾ ಕರಾವಳಿ ಕಾವಲು ಪಡೆಗಳ ಸಭೆ
    • ಏಷ್ಯನ್ ಗೇಮ್ಸ್ 2026ರ 85 ಪದಕಗಳ ಸಾಧನೆಗೆ ಮೋದಿ ಮೆಚ್ಚುಗೆ; 2036ರ ಒಲಿಂಪಿಕ್ಸ್ ಆತಿಥ್ಯದ ಪ್ರಸ್ತಾಪ
    • PM Modi interacted with India’s Asian Games 2026 contingent
    • Karnataka Drought Losses May Touch ₹70,000 Crore; All-Party Delegation to Meet Centre
    • Price Hikes, Corruption Are Congress Government’s ‘Guarantees’: Dr. C.T. Ravi
    Copyright 2026 — ANU News. All rights reserved. Blogsy WordPress Theme