Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ನಿತಿನ್ ನಬಿನ್ ಭೇಟಿಯಾದ ಕೆಮತ್ತೋಬ್ಬ ಕ್ರಿಕೆಟಿಗ; ಬಿಜೆಪಿ ಸೇರುತ್ತಾರ ಶಮಿ?

By ANU News
November 30, 2026 1 Min Read
Comments Off on ನಿತಿನ್ ನಬಿನ್ ಭೇಟಿಯಾದ ಕೆಮತ್ತೋಬ್ಬ ಕ್ರಿಕೆಟಿಗ; ಬಿಜೆಪಿ ಸೇರುತ್ತಾರ ಶಮಿ?

ನವದೆಹಲಿ: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಭಾನುವಾರ ನಡೆದ ಈ ಭೇಟಿಯ ವೇಳೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕುನ್ವರ್ ಬಾಸಿತ್ ಅಲಿ ಉಪಸ್ಥಿತರಿದ್ದರು. ಶಮಿ ಅವರ ಭೇಟಿಯ ಬೆನ್ನಲ್ಲೇ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಇತ್ತೀಚೆಗಷ್ಟೇ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರಿಗೆ ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಯಲ್ಲಿ ವಿಶೇಷ ಆಹ್ವಾನಿತರ ಸ್ಥಾನ ನೀಡಲಾಗಿತ್ತು. ಇದರ ಬೆನ್ನಲ್ಲೇ ಶಮಿ ಬಿಜೆಪಿ ಅಧ್ಯಕ್ಷರನ್ನು ಭೇಟಿಯಾಗಿರುವುದು ಗಮನ ಸೆಳೆದಿದೆ.

ನವೆಂಬರ್ 6ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಶಮಿ, ಇದೇ ದಿನ 13 ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಮೂಲಕ 13 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದರು. ಆದರೆ, ಬಿಜೆಪಿ ನಾಯಕರೊಂದಿಗಿನ ಭೇಟಿಯು ಅವರ ಮುಂದಿನ ನಡೆ ಕುರಿತು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

Author

ANU News

Follow Me
Other Articles
Previous

ಮಂಗಳೂರು: ಸೋನಿಯಾ ಗಾಂಧಿ ಆತ್ಮಚರಿತ್ರೆ ಬಿಡುಗಡೆಗೊಳಿಸಿದ ಬಿ.ಕೆ. ಹರಿಪ್ರಸಾದ್

Next

Experts Debate Hindutva and Viksit Bharat 2047 at Bengaluru Writers’ Convention

Recent Posts

  • Experts Debate Hindutva and Viksit Bharat 2047 at Bengaluru Writers’ Convention
  • ನಿತಿನ್ ನಬಿನ್ ಭೇಟಿಯಾದ ಕೆಮತ್ತೋಬ್ಬ ಕ್ರಿಕೆಟಿಗ; ಬಿಜೆಪಿ ಸೇರುತ್ತಾರ ಶಮಿ?
  • ಮಂಗಳೂರು: ಸೋನಿಯಾ ಗಾಂಧಿ ಆತ್ಮಚರಿತ್ರೆ ಬಿಡುಗಡೆಗೊಳಿಸಿದ ಬಿ.ಕೆ. ಹರಿಪ್ರಸಾದ್
  • ಸೇಂಟ್ ಜರ್ಮೇನ್ಸ್ ಅಕಾಡೆಮಿಯಲ್ಲಿ ‘ಚಾಂಪಿಯನ್ಸ್ ಇನ್ ಮೀ’ ಸಮಗ್ರ ಕ್ರೀಡಾಕೂಟ; HIV ಪೀಡಿತ ಮಕ್ಕಳ ಕ್ರೀಡಾ ಪ್ರತಿಭೆಗೆ ಸರ್ಕಾರದ ಬೆಂಬಲ
  • ಕ್ಷೇತ್ರ ಮರುವಿಂಗಡಣೆ ವಿಚಾರ: ಡಿಎಂಕೆ ಮನವೊಲಿಕೆಗಾಗಿ ಕೈ ನಾಯಕರು ಚೆನ್ನೈಗೆ ದೌಡು, ನಿಲುವು ಬದಲಿಸಲು ಸ್ಟಾಲಿನ್ ನಕಾರ
Copyright 2026 — ANU News. All rights reserved. Blogsy WordPress Theme