Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಿಎಂ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು; 9ನೇ ದಿನವೂ ವನಿತೆಯರ ಹೋರಾಟ

By ANU News
November 25, 2026 1 Min Read
Comments Off on ಸಿಎಂ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು; 9ನೇ ದಿನವೂ ವನಿತೆಯರ ಹೋರಾಟ

ಬೆಂಗಳೂರು: AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮಂಗಳವಾರ ಎಂಟನೇ ದಿನವೂ ಮುಂದುವರಿಯಿತು. ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳುತ್ತಿದ್ದು, ಸಾವಿರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ.

ಮಂಗಳವಾರ ಜಪಾನ್‌ನಿಂದ ವಿಡಿಯೋ ಕರೆ ಮೂಲಕ ಆಶಾ ಮುಖಂಡರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶಾಶ್ವತ ಪರಿಹಾರ ಕಲ್ಪಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿ, ಹೋರಾಟ ಹಿಂಪಡೆಯುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಶಾ ಕಾರ್ಯಕರ್ತೆಯರು, ಮುಖ್ಯಮಂತ್ರಿ ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಬಂದು ಆದೇಶ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಪ್ರಧಾನ ಕಾರ್ಯದರ್ಶಿ ಉಮಾಮಣಿ ಮಾತನಾಡಿ, ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರೆಲ್ಲರೂ ದುಡಿಯುವ ಮಹಿಳೆಯರಾಗಿದ್ದು, ಸರ್ಕಾರ ಎಲ್ಲರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ನಟ ಮುಖ್ಯಮಂತ್ರಿ ಚಂದ್ರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹10,000 ಗೌರವಧನ ನೀಡುವ ಭರವಸೆ ನೀಡಿದ್ದರೂ ಅದನ್ನು ಈಡೇರಿಸಿಲ್ಲ ಎಂದು ಟೀಕಿಸಿದರು. ಆಶಾ ಕಾರ್ಯಕರ್ತೆಯರಲ್ಲಿ ಸರ್ಕಾರ ಕ್ಷಮೆ ಕೇಳಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಕೇರಳ ಸರ್ಕಾರ ₹12,000 ನೀಡುತ್ತಿರುವಾಗ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ವಕೀಲ ಹಾಗೂ ಕೆಂಪೇಗೌಡ ಯುವವಾಹಿನಿ ಸಂಘದ ಸ್ಥಾಪಕ ಜಗನ್ನಾಥ ಗೌಡ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಕಾರ್ಯಕರ್ತೆಯರ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಈಡೇರಿಸಬೇಕು ಎಂದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉಮೇಶ್ ಆವರೆಗೆರೆ ಮಾತನಾಡಿ, ₹15,000 ಗೌರವಧನ ನೀಡುವುದು ಸರ್ಕಾರಕ್ಕೆ ಹೊರೆಯಾಗಬಾರದು ಎಂದು ಆಗ್ರಹಿಸಿದರು.

ಮಂಗಳವಾರ ಹಲವು ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Author

ANU News

Follow Me
Other Articles
Previous

Karnataka ASHA Workers Reject CM’s Appeal, Continue Protest for Ninth Day

Next

Karnataka Plans Single Digital Platform for Urban Local Body Services

Recent Posts

  • Karnataka Plans Single Digital Platform for Urban Local Body Services
  • ಸಿಎಂ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು; 9ನೇ ದಿನವೂ ವನಿತೆಯರ ಹೋರಾಟ
  • Karnataka ASHA Workers Reject CM’s Appeal, Continue Protest for Ninth Day
  • Actress Ramya Backs ASHA Workers’ Protest, Says Govt Must Honour ₹10,000 Pay Promise
  • ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; 1-0 ಅಂತರದಲ್ಲಿ ಸರಣಿ ವಶ
Copyright 2026 — ANU News. All rights reserved. Blogsy WordPress Theme