Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; 1-0 ಅಂತರದಲ್ಲಿ ಸರಣಿ ವಶ

By ANU News
November 25, 2026 1 Min Read
Comments Off on ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; 1-0 ಅಂತರದಲ್ಲಿ ಸರಣಿ ವಶ

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ 2026ರ ಭಾರತ-ನ್ಯೂಜಿಲೆಂಡ್ ಸೆಂಚುರಿ ಆಫ್ ಸ್ಪೋರ್ಟಿಂಗ್ ಯೂನಿಟಿ ಹಾಕಿ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿದೆ.

ಆಕ್ಲೆಂಡ್‌ನ ಲಾಯ್ಡ್ ಎಲ್ಸ್ಮೋರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು.

ಪಂದ್ಯದ 9ನೇ ನಿಮಿಷದಲ್ಲಿ ನ್ಯೂಜಿಲೆಂಡ್‌ನ ಡೈಲನ್ ಥಾಮಸ್ ಮೊದಲ ಗೋಲು ದಾಖಲಿಸಿದರು. ಭಾರತದ ಪರ 16ನೇ ನಿಮಿಷದಲ್ಲಿ ಸಂಜಯ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಸಮಬಲ ಸಾಧಿಸಿದರು. ಎರಡು ನಿಮಿಷಗಳ ಬಳಿಕ ಕಾರ್ತಿ ಸೆಲ್ವಂ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಆದರೆ, 55ನೇ ನಿಮಿಷದಲ್ಲಿ ಬೆಂಜಿ ಕಲ್ಹೇನ್ ಗೋಲು ಗಳಿಸಿ ನ್ಯೂಜಿಲೆಂಡ್‌ಗೆ ಸಮಬಲ ತಂದುಕೊಟ್ಟರು. ನಂತರ ಎರಡೂ ತಂಡಗಳಿಂದ ಗೋಲು ದಾಖಲಾಗದ ಕಾರಣ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಮೊದಲ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯ 2-2ರಿಂದ ಡ್ರಾಗೊಂಡಿತ್ತು. ಹೀಗಾಗಿ ಸರಣಿಯನ್ನು ಭಾರತ 1-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರೀಡಾ ಸಂಬಂಧಗಳಿಗೆ ಈ ಸರಣಿ 100 ವರ್ಷ ಪೂರ್ಣಗೊಂಡ ಸಂದರ್ಭವಾಗಿದೆ. 1926ರಲ್ಲಿ ಮೇಜರ್ ಧ್ಯಾನ್ ಚಂದ್ ಒಳಗೊಂಡ ಭಾರತೀಯ ಸೇನೆಯ ಹಾಕಿ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡ ಮೊದಲ ಭಾರತೀಯ ತಂಡವಾಗಿತ್ತು.

Author

ANU News

Follow Me
Other Articles
Previous

ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ರಮ್ಯಾ ಬೆಂಬಲ: ಸರ್ಕಾರ ಬೇಡಿಕೆ ಈಡೇರಿಸುತ್ತದೆ ಎಂದು ವಿಶ್ವಾಸ

Next

Actress Ramya Backs ASHA Workers’ Protest, Says Govt Must Honour ₹10,000 Pay Promise

Recent Posts

  • ಸಿಎಂ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು; 9ನೇ ದಿನವೂ ವನಿತೆಯರ ಹೋರಾಟ
  • Karnataka ASHA Workers Reject CM’s Appeal, Continue Protest for Ninth Day
  • Actress Ramya Backs ASHA Workers’ Protest, Says Govt Must Honour ₹10,000 Pay Promise
  • ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; 1-0 ಅಂತರದಲ್ಲಿ ಸರಣಿ ವಶ
  • ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ರಮ್ಯಾ ಬೆಂಬಲ: ಸರ್ಕಾರ ಬೇಡಿಕೆ ಈಡೇರಿಸುತ್ತದೆ ಎಂದು ವಿಶ್ವಾಸ
Copyright 2026 — ANU News. All rights reserved. Blogsy WordPress Theme