Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

2027ರ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

By ANU News
November 7, 2026 1 Min Read
Comments Off on 2027ರ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2027ನೇ ಸಾಲಿನ 10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 16ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, 10ನೇ ತರಗತಿ ಪರೀಕ್ಷೆಗಳು ಮಾರ್ಚ್ 9ರಂದು ಹಾಗೂ 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 9ರಂದು ಮುಕ್ತಾಯಗೊಳ್ಳಲಿವೆ.

10ನೇ ತರಗತಿಯ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿ:

  • ಫೆಬ್ರವರಿ 17: ಗಣಿತ
  • ಫೆಬ್ರವರಿ 22: ವಿಜ್ಞಾನ
  • ಫೆಬ್ರವರಿ 26: ಇಂಗ್ಲಿಷ್
  • ಮಾರ್ಚ್ 3: ಹಿಂದಿ

12ನೇ ತರಗತಿಯ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿ:

  • ಫೆಬ್ರವರಿ 16: ಭೌತಶಾಸ್ತ್ರ (ಫಿಸಿಕ್ಸ್)
  • ಫೆಬ್ರವರಿ 23: ಲೆಕ್ಕಶಾಸ್ತ್ರ
  • ಫೆಬ್ರವರಿ 25: ಭೂಗೋಳಶಾಸ್ತ್ರ (ಜಿಯಾಲಜಿ)
  • ಫೆಬ್ರವರಿ 27: ರಸಾಯನಶಾಸ್ತ್ರ (ಕೆಮಿಸ್ಟ್ರಿ)
  • ಮಾರ್ಚ್ 2: ಮನೋವಿಜ್ಞಾನ (ಸೈಕಾಲಜಿ)
  • ಮಾರ್ಚ್ 5: ಇಂಗ್ಲಿಷ್
  • ಮಾರ್ಚ್ 9: ಗಣಿತ
  • ಮಾರ್ಚ್ 13: ಹಿಂದಿ
  • ಮಾರ್ಚ್ 16: ಅರ್ಥಶಾಸ್ತ್ರ
  • ಮಾರ್ಚ್ 19: ರಾಜ್ಯಶಾಸ್ತ್ರ
  • ಮಾರ್ಚ್ 20: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ)
  • ಮಾರ್ಚ್ 25: ಜೀವಶಾಸ್ತ್ರ (ಬಯಾಲಜಿ)
  • ಮಾರ್ಚ್ 27: ಇತಿಹಾಸ
  • ಮಾರ್ಚ್ 30: ಸಮಾಜಶಾಸ್ತ್ರ
  • ಮಾರ್ಚ್ 31: ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಟೆಕ್ನಾಲಜಿ
  • ಏಪ್ರಿಲ್ 1: ಬ್ಯುಸಿನೆಸ್ ಸ್ಟಡೀಸ್, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್

ವಿದ್ಯಾರ್ಥಿಗಳು ಸಂಪೂರ್ಣ ಪರೀಕ್ಷಾ ವೇಳಾಪಟ್ಟಿಯನ್ನು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪರಿಶೀಲಿಸಬಹುದು.

ಇದಲ್ಲದೆ, 10 ಮತ್ತು 12ನೇ ತರಗತಿಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ಮಂಡಳಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು cbseacademic.nic.in ವೆಬ್‌ಸೈಟ್ ಮೂಲಕ ಅವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬಹುದು.

 

Author

ANU News

Follow Me
Other Articles
Previous

FRPಗೆ ಹೆಚ್ಚುವರಿ ಪ್ರೋತ್ಸಾಹಧನ ಸೇರಿಸಿ ಕಬ್ಬಿಗೆ SAP ನಿಗದಿ ಮಾಡಿ; ನ. 20ರೊಳಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ; ಕುರುಬೂರು ಎಚ್ಚರಿಕೆ

Next

CBSE Board Exams 2027: Class 10, 12 Timetables Released; Exams Begin February 16

Recent Posts

  • Panchamasali Community to Stage Hunger Strike in Belagavi on December 10
  • ಮೀಸಲಾತಿ ಹಕ್ಕೊತ್ತಾಯ; ಡಿ.10ರಂದು ಬೆಳಗಾವಿಯಲ್ಲಿ ಪಂಚಮಸಾಲಿಗಳ ಉಪವಾಸ ಸತ್ಯಾಗ್ರಹ
  • Bengaluru Workshop Trains Officials on Child Marriage Prevention, Adoption Laws
  • ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ, ಅಂತರರಾಷ್ಟ್ರೀಯ ದತ್ತು ಮಾಸಾಚರಣೆ, ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
  • Dispose of Praja Seva Andolana applications on time, K’taka minister tells officials
Copyright 2026 — ANU News. All rights reserved. Blogsy WordPress Theme