Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮೇಕೆದಾಟು ಸೇರಿ ಕಾವೇರಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ: ತಮಿಳುನಾಡು ಸಿಎಂಗೆ ಕುರುಬೂರು ಮನವಿ

By ANU News
July 26, 2026 2 Min Read
0

ಬೆಂಗಳೂರು: ಕಾವೇರಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ನೇತೃತ್ವದ ನಿಯೋಗ ಆಗಸ್ಟ್ 3ರಂದು ಕರ್ನಾಟಕಕ್ಕೆ ಆಗಮಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದಶಕಗಳಿಂದ ಮುಂದುವರಿದಿರುವ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಘರ್ಷದ ಬದಲು ಸಂವಾದವೇ ಶಾಶ್ವತ ಪರಿಹಾರ ನೀಡಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಳೆಯ ಕೊರತೆ ಇರುವ ವರ್ಷಗಳಲ್ಲಿ ಜಲಾಶಯಗಳಲ್ಲಿನ ನೈಜ ನೀರಿನ ಸಂಗ್ರಹವನ್ನು ಆಧರಿಸಿ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ‘ಡಿಸ್ಟ್ರೆಸ್ ಶೇರಿಂಗ್’ (Distress Sharing Formula) ಸೂತ್ರವನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ಬೆಂಗಳೂರು ಸೇರಿದಂತೆ ಕರ್ನಾಟಕದ ನಗರಗಳ ಹಾಗೂ ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಅಗತ್ಯವನ್ನು ರಾಜಕೀಯದಿಂದ ಹೊರತಾಗಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದಿದ್ದಾರೆ.

ಉಭಯ ರಾಜ್ಯಗಳ ನೀರಾವರಿ ತಜ್ಞರು, ಹವಾಮಾನ ತಜ್ಞರು, ಕಾನೂನು ಪರಿಣಿತರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಾಂತ್ರಿಕ ಸಮಿತಿಯನ್ನು ರಚಿಸಿ, ಉಪಗ್ರಹ ಮಾಹಿತಿ ಮತ್ತು ಜಲಾಶಯಗಳ ನೈಜ ಸ್ಥಿತಿಗತಿಯನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಶಾಂತಕುಮಾರ್ ಸಲಹೆ ನೀಡಿದ್ದಾರೆ.

ಕಳೆದ ವರ್ಷ ಅಧಿಕ ಮಳೆಯಿಂದ ಸುಮಾರು 250 ಟಿಎಂಸಿ ನೀರು ಸಮುದ್ರ ಪಾಲಾಗಿತ್ತು. ಆದರೆ ಈ ವರ್ಷ ಬರ ಪರಿಸ್ಥಿತಿ ಎದುರಾಗಿರುವುದರಿಂದ, ಹೆಚ್ಚುವರಿ ನೀರನ್ನು ಸಂಗ್ರಹಿಸಿ ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ಸೌಹಾರ್ದಯುತ ಚರ್ಚೆ ನಡೆಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಮೇಕೆದಾಟು ಯೋಜನೆಯಿಂದ ಬರಗಾಲದ ಸಂದರ್ಭದಲ್ಲೂ ತಮಿಳುನಾಡಿಗೆ ನಿಯಂತ್ರಿತವಾಗಿ ನೀರು ಹರಿಸಲು ಅನುಕೂಲವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಯೋಜನೆಗೆ ಸಕಾರಾತ್ಮಕ ಬೆಂಬಲ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ, ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ನೀರು ಬಳಕೆಯ ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಜಂಟಿ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.

“ಕಾವೇರಿ ಜೀವನದಿ ಕರ್ನಾಟಕ ಮತ್ತು ತಮಿಳುನಾಡನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು. ನ್ಯಾಯಾಲಯಗಳಲ್ಲಿನ ದೀರ್ಘಕಾಲದ ವ್ಯಾಜ್ಯಗಳಿಗಿಂತ ಉಭಯ ರಾಜ್ಯಗಳ ನಾಯಕರು ಪರಸ್ಪರ ಗೌರವ ಮತ್ತು ವಿಶ್ವಾಸದೊಂದಿಗೆ ಕೈಗೊಳ್ಳುವ ನಿರ್ಧಾರಗಳು ಕೋಟ್ಯಂತರ ರೈತರು ಹಾಗೂ ನಾಗರಿಕರ ಬದುಕಿಗೆ ನೆಮ್ಮದಿ ತರಬಲ್ಲವು” ಎಂದು ಶಾಂತಕುಮಾರ್ ಹೇಳಿದ್ದಾರೆ.

ಆಗಸ್ಟ್ 3ರಂದು ನಡೆಯಲಿರುವ ಸಭೆ ಕೇವಲ ಔಪಚಾರಿಕ ಭೇಟಿಯಾಗದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಪರಸ್ಪರ ಸಹಕಾರ ಮತ್ತು ಶಾಶ್ವತ ಪರಿಹಾರದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

Author

ANU News

Follow Me
Other Articles
Previous

Ramesh Babu criticises BJP state chief Vijayendra, calls his remarks ‘shameful’

Next

Mekedatu talks should pave way for lasting Cauvery solution, says farmers’ federation chief

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Naga Chaitanya’s ‘Vrushakarma’ to hit screens on December 4
    • ನಾಗ ಚೈತನ್ಯ ‘ವೃಷಕರ್ಮ’ ಡಿಸೆಂಬರ್ 4ಕ್ಕೆ ತೆರೆಗೆ
    • ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ UPSCಯಿಂದ ಅರ್ಜಿ ಆಹ್ವಾನ
    • UPSC invites applications for direct recruitment to various government posts
    • ಅರಣ್ಯ ಹಕ್ಕು ಕಾಯ್ದೆ: ಬಾಕಿ ಹಕ್ಕು ಕೋರಿಕೆ ಶೀಘ್ರ ಇತ್ಯರ್ಥಕ್ಕೆ ಕೇಂದ್ರ ಸೂಚನೆ
    Copyright 2026 — ANU News. All rights reserved. Blogsy WordPress Theme