Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

HMTಯಿಂದ ‘HMT ಕನ್ನಡಿಗ’ ಹೆಸರಿನ ನಾಲ್ಕು ವಿಶೇಷ ಕೈಗಡಿಯಾರಗಳ ಅನಾವರಣ

By ANU News
November 2, 2026 1 Min Read
Comments Off on HMTಯಿಂದ ‘HMT ಕನ್ನಡಿಗ’ ಹೆಸರಿನ ನಾಲ್ಕು ವಿಶೇಷ ಕೈಗಡಿಯಾರಗಳ ಅನಾವರಣ

ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರದ ಹೆಮ್ಮೆಯ ಸಾರ್ವಜನಿಕ ವಲಯದ ಸಂಸ್ಥೆ ಎಚ್‌ಎಂಟಿ ಲಿಮಿಟೆಡ್ ತಯಾರಿಸಿರುವ ‘HMT ಕನ್ನಡಿಗ’ ಸರಣಿಯ ನಾಲ್ಕು ಉನ್ನತ ಶ್ರೇಣಿಯ ಕೈಗಡಿಯಾರಗಳನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಅನಾವರಣಗೊಳಿಸಿದರು.

ಈ ಕುರಿತು ಮಾತನಾಡಿದ ಅವರು, ಅತ್ಯುತ್ತಮ ಗುಣಮಟ್ಟದ ನಾಲ್ಕು ವಿಶೇಷ ಕೈಗಡಿಯಾರಗಳನ್ನು ಕನ್ನಡ ನಾಡಿಗೆ ಸಮರ್ಪಿಸಿರುವುದು ಸಂತಸದ ಸಂಗತಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ ಎಚ್‌ಎಂಟಿ ಕಾರ್ಖಾನೆ ಮತ್ತೆ ಹಿಂದಿನ ವೈಭವದ ದಿನಗಳನ್ನು ಕಾಣಲಿದೆ ಎಂಬ ವಿಶ್ವಾಸವಿದೆ. ಹೊಸದಾಗಿ ಅನಾವರಣಗೊಂಡಿರುವ ‘HMT ಕನ್ನಡಿಗ’ ಕೈಗಡಿಯಾರಗಳು ಕನ್ನಡ ನಾಡಿನ ಅಸ್ಮಿತೆ, ಪರಂಪರೆ, ಸಂಸ್ಕೃತಿ ಮತ್ತು ಕೌಶಲ್ಯದ ಪ್ರತೀಕಗಳಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸಾ.ರಾ. ಮಹೇಶ್, ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕರಾದ ಮುನಿರತ್ನ, ಎಂ.ಟಿ. ಕೃಷ್ಣಪ್ಪ, ಟಿ.ಎ. ಶರವಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟಿತು. ಕನ್ನಡ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

Author

ANU News

Follow Me
Other Articles
Previous

ಅನಂತಪುರ ಚೈನ್‌ಸಾ ದಾಳಿ ಪ್ರಕರಣ: ಎನ್ಕೌಂಟರ್ ಮಾಡಿ ಆರೋಪಿಯನ್ನು ಸೆರೆಹಿಡಿದ ಪೊಲೀಸ್

Next

Chandrababu Naidu Cancels Delhi Visit Ahead of Fresh Cyclone Threat

Recent Posts

  • Bommai Urges Chikkaballapur Voters to Elect Sudhakar in 2028 for Yettinahole Project
  • Tamil Nadu to Set Up 26 New POCSO Courts, Four Special NDPS Courts
  • ರಾಮ್ ಚರಣ್–ಸುಕುಮಾರ್ ಹೊಸ ಚಿತ್ರ ‘RC17’; ಚಿರಂಜೀವಿ ಮೊದಲ ಕ್ಲಾಪ್
  • Ram Charan, Sukumar Launch Second Collaboration ‘RC17’ With Pooja Ceremony
  • ಹಾಲಿನ ದರ ಏರಿಕೆ ವಿವಾದ: ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡ ಜೆಡಿಎಸ್
Copyright 2026 — ANU News. All rights reserved. Blogsy WordPress Theme