Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆದೇಶ

IPLನಲ್ಲಿ ಸನ್ ರೈಸರ್ಸ್ ಬೃಹತ್ ಮೊತ್ತದ ದಾಖಲೆ, RCB ಹೀನಾಯ ಸೋಲಿನ ಇತಿಹಾಸ

By ANU News
May 23, 2026 1 Min Read
0

ಹೈದರಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಶುಕ್ರವಾರದ ಮಹತ್ವದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 255 ರನ್ ಕಲೆಹಾಕಿತು.

ಬೃಹತ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ, ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ದಾಖಲಿಸಿತು.

ಈ ಪಂದ್ಯದಲ್ಲಿ 255 ರನ್ ಸಿಡಿಸಿದ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲೇ ಒಂದೇ ತಂಡದ ವಿರುದ್ಧ ಎರಡು ಬಾರಿ 250ಕ್ಕೂ ಅಧಿಕ ಮೊತ್ತ ಪೇರಿಸಿದ ವಿಶೇಷ ದಾಖಲೆಯನ್ನು ನಿರ್ಮಿಸಿದೆ.

ಇನ್ನೊಂದೆಡೆ, ಈ ಸೋಲಿನೊಂದಿಗೆ ಆರ್‌ಸಿಬಿ ತಂಡ ಹೀನಾಯ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಆದರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪ್ರಸ್ತುತ ಆರ್‌ಸಿಬಿ 18 ಅಂಕಗಳೊಂದಿಗೆ +0.783 ನೆಟ್ ರನ್‌ರೇಟ್ ಹೊಂದಿ ಮೊದಲ ಸ್ಥಾನದಲ್ಲಿದ್ದರೆ, +0.695 ನೆಟ್ ರನ್‌ರೇಟ್ ಹೊಂದಿರುವ Gujarat Titans ಗುಜರಾತ್ ಟೈಟನ್ಸ್ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಐಪಿಎಲ್ ಕ್ವಾಲಿಫೈಯರ್ ಹಂತದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

Author

ANU News

Follow Me
Other Articles
Previous

ಫ್ಲಿಪ್‌ಕಾರ್ಟ್ ಜೊತೆ ಅಂಚೆ ಇಲಾಖೆ ಒಪ್ಪಂದ; ದೇಶಾದ್ಯಂತ ಪಾರ್ಸೆಲ್ ವಿತರಣೆಗೆ ಹೊಸ ಬಲ

Next

ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme