Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ; ಹೊಸ ನಿರ್ಬಂಧಿತ ವಲಯ ಘೋಷಿಸಿದ ಇರಾನ್

By Anu News
September 7, 2026 1 Min Read
0

ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕ ತನ್ನ ಸೇನಾ ದಾಳಿ ಮತ್ತು ಬೆದರಿಕೆಗಳನ್ನು ನಿಲ್ಲಿಸದಿದ್ದರೆ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇದರ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಹಾಗೂ ಪರ್ಷಿಯನ್ ಕೊಲ್ಲಿಯ ಕೆಲವು ಭಾಗಗಳನ್ನು ಒಳಗೊಂಡಂತೆ ಹೊಸ ‘ನಿರ್ಬಂಧಿತ ಕಡಲ ವಲಯ’ ಸ್ಥಾಪಿಸಲು ಇರಾನ್ ನಿರ್ಧರಿಸಿದೆ.

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಈ ಕುರಿತು ಎಚ್ಚರಿಕೆ ನೀಡಿದ್ದು, ಟೆಹ್ರಾನ್‌ನೊಂದಿಗೆ ಸಮನ್ವಯ ಮಾಡಿಕೊಳ್ಳದೆ ಈ ವಲಯ ಪ್ರವೇಶಿಸುವ ಹಡಗುಗಳ ವಿರುದ್ಧ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಭಾನುವಾರ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕ ಇರಾನ್ ವಿರುದ್ಧ ಬೆದರಿಕೆ ಅಥವಾ ದಾಳಿ ನಡೆಸದಿದ್ದರೆ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಜೂನ್‌ನಲ್ಲಿ ಇರಾನ್-ಅಮೆರಿಕ ನಡುವೆ ನಡೆದ ಶಾಂತಿ ತಿಳಿವಳಿಕೆಯಡಿ ವಾಷಿಂಗ್ಟನ್ ಪ್ರಾಯೋಗಿಕ ಕ್ರಮ ಕೈಗೊಳ್ಳುವವರೆಗೆ ಜಲಮಾರ್ಗದ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ

Author

Anu News

Follow Me
Other Articles
Previous

Discrimination in drought taluk declaration: Vijayendra attacks Karnataka government

Next

Iran-US tensions escalate as Tehran plans restricted zone near Strait of Hormuz

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • BJP padyatra gets public support, says CT Ravi; Sriramulu urges people to back party
    • ಬಿಜೆಪಿ ಪಾದಯಾತ್ರೆಗೆ ಉತ್ತಮ ಜನಬೆಂಬಲ: ಸಿ.ಟಿ. ರವಿ
    • BJP padyatra is ‘paid-for show’, alleges BK Hariprasad; CT Ravi hits back
    • ಬಿಜೆಪಿ ಪಾದಯಾತ್ರೆ ‘ಹಣ ನೀಡಿ ನಡೆಸುತ್ತಿರುವ ಯಾತ್ರೆ’: ಬಿ.ಕೆ. ಹರಿಪ್ರಸಾದ್
    • ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಸಹಿಸಲ್ಲ: ಸಿಎಂ ವಿಜಯ್ ಎಚ್ಚರಿಕೆ
    Copyright 2026 — ANU News. All rights reserved. Blogsy WordPress Theme