Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ

By Anu News
September 10, 2026 1 Min Read
0

ಮುಂಬೈ: ಬಾಲಿವುಡ್‌ ಚಿತ್ರರಂಗದಲ್ಲಿ ಹೊಸತನದ ಕೊರತೆ ಎದುರಾಗಿದೆ. ಒಂದು ಸಿನಿಮಾ ಯಶಸ್ವಿಯಾದರೆ ಸಾಕು, ಅದೇ ಮಾದರಿಯ ಕಥೆ, ನಿರೂಪಣೆ ಹಾಗೂ ಫಾರ್ಮುಲಾವನ್ನು ಅನುಸರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನಟಿ ಕರೀನಾ ಕಪೂರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ‘ಅನಿಮಲ್‌’ ಸಿನಿಮಾ ಯಶಸ್ವಿಯಾದ ಬಳಿಕ ಹಿಂಸಾತ್ಮಕ ಕಥೆಗಳತ್ತ ಚಿತ್ರರಂಗ ಹೆಚ್ಚಿನ ಒಲವು ತೋರಿಸುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಕೇವಲ ಹಿಟ್‌ ಸಿನಿಮಾಗಳ ಸೂತ್ರವನ್ನು ಕಾಪಿ ಮಾಡುವುದರಿಂದ ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯವಿಲ್ಲ. ಬದಲಾಗಿ ಹೊಸ ಕಥೆ ಮತ್ತು ವಿಭಿನ್ನ ನಿರೂಪಣೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ.

ಬರಹಗಾರರಿಗೆ ಸಿಗಲಿ ಪ್ರಾಮುಖ್ಯ

ಚಿತ್ರವೊಂದರ ಯಶಸ್ಸಿನಲ್ಲಿ ಕಥೆಗಾರರು ಹಾಗೂ ಬರಹಗಾರರ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಹಿಂದಿ ಚಿತ್ರರಂಗದಲ್ಲಿ ಅವರಿಗೆ ನಿರೀಕ್ಷಿತ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬರಹಗಾರರಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ವಿಭಿನ್ನ ಕಥೆಗಳು ಮೂಡಿಬರಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಲಯಾಳಂ ಚಿತ್ರರಂಗವನ್ನು ಉದಾಹರಣೆಯಾಗಿ ನೀಡಿರುವ ಕರೀನಾ, ಅಲ್ಲಿನ ಸಿನಿಮಾಗಳ ಯಶಸ್ಸಿಗೆ ಉತ್ತಮ ಕಥೆಗಳು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ‘ಪ್ರೇಮಲು’ ಹಾಗೂ ‘ಮಂಜುಮ್ಮಲ್‌ ಬಾಯ್ಸ್‌’ನಂತಹ ಕಡಿಮೆ ಬಜೆಟ್‌ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದೇ ಇದಕ್ಕೆ ಉದಾಹರಣೆ.

ನಟ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಮಲಯಾಳಂ ಚಿತ್ರರಂಗದಲ್ಲಿ ಸೃಜನಶೀಲ ಬರಹಗಾರರಿಗೆ ಹೆಚ್ಚಿನ ಗೌರವ ಮತ್ತು ಪ್ರೋತ್ಸಾಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬದಲಾಗಬೇಕು ಹಳೆಯ ಲೆಕ್ಕಾಚಾರ

ನಿರ್ದೇಶಕರು ಮತ್ತು ನಿರ್ಮಾಪಕರು ಹೊಸ ಪ್ರಯೋಗಗಳಿಗೆ ಬೆಂಬಲ ನೀಡಬೇಕು. ಯುವ ನಟ-ನಟಿಯರಿದ್ದರೆ ಮಾತ್ರ ಸಿನಿಮಾ ಯಶಸ್ವಿಯಾಗುತ್ತದೆ ಎಂಬ ಹಳೆಯ ಕಲ್ಪನೆಯಿಂದ ಚಿತ್ರರಂಗ ಹೊರಬರಬೇಕಿದೆ.

ನಿರ್ದೇಶಕಿ ಮೇಘನಾ ಗುಲ್ಜಾರ್‌ ಕೂಡ ಕರೀನಾ ಅವರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇಂದಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಉತ್ತಮ ಕಥೆ ಮತ್ತು ಪರಿಣಾಮಕಾರಿ ನಿರೂಪಣೆ ಇದ್ದಾಗ ಮಾತ್ರ ಸಿನಿಮಾವನ್ನು ಸ್ವೀಕರಿಸುತ್ತಾರೆ. ಹೀಗಾಗಿ ಪ್ರೇಕ್ಷಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಬಾಲಿವುಡ್‌ ಕೂಡ ಬದಲಾಗಬೇಕಿದೆ ಎಂದು ಅವರು ಹೇಳಿದ್ದಾರೆ.

Author

Anu News

Follow Me
Other Articles
Previous

SC rejects Abu Salem’s plea for early release, says 25 years complete in 2030

Next

ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Prashanth Neel-presented horror film ‘418’ gets A certificate after CBFC raises concerns over scary scenes
    • Kareena Kapoor flags Bollywood’s lack of originality, says hit formulas won’t make great films
    • ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್
    • ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ
    • SC rejects Abu Salem’s plea for early release, says 25 years complete in 2030
    Copyright 2026 — ANU News. All rights reserved. Blogsy WordPress Theme