Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕರ್ನಾಟಕ–ಜಪಾನ್ ಕೈಗಾರಿಕಾ ಬಾಂಧವ್ಯ ಬಲವರ್ಧನೆ; ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌, ರೊಬೋಟಿಕ್ಸ್‌ ಕ್ಷೇತ್ರಗಳಲ್ಲಿ ಹೂಡಿಕೆಗೆ ಆಹ್ವಾನ

By ANU News
October 25, 2026 1 Min Read
0

ಬೆಂಗಳೂರು: ಕರ್ನಾಟಕ ಮತ್ತು ಜಪಾನ್ ನಡುವಿನ ಕೈಗಾರಿಕಾ ಬಾಂಧವ್ಯಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಜಪಾನ್‌ನ ಕಾಗೋಶಿಮಾ ಪ್ರಾಂತ್ಯದ ಗವರ್ನರ್ ಕೊಯಿಚಿ ಶಿಯೋತಾ ಅವರೊಂದಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಚರ್ಚೆ ನಡೆಸಿದರು.

ಜಪಾನ್‌ನ ಕಾನ್ಸುಲ್ ಜನರಲ್ ಹಿರೋಷಿ ನವಾಟಾ ಅವರ ಉಪಸ್ಥಿತಿಯಲ್ಲಿ ನಡೆದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಸಚಿವರು, ಕರ್ನಾಟಕ ಮತ್ತು ಜಪಾನ್ ನಡುವಿನ ಸಂಬಂಧ ಹಲವು ದಶಕಗಳ ಇತಿಹಾಸ ಹೊಂದಿದೆ ಎಂದು ತಿಳಿಸಿದರು. ಟೊಯೊಟಾ, ನಿಡೆಕ್‌, ಹೋಂಡಾ ಮತ್ತು ಹಿಟಾಚಿ ಸೇರಿದಂತೆ ಜಪಾನ್‌ನ ಹಲವು ಪ್ರಮುಖ ಕಂಪನಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತಿವೆ ಎಂದು ವಿವರಿಸಿದರು.

ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌, ರೊಬೋಟಿಕ್ಸ್‌ ಮತ್ತು ಕೈಗಾರಿಕಾ ಸ್ವಯಂಚಾಲನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿಫುಲ ಅವಕಾಶಗಳಿವೆ. ಕೈಗಾರಿಕೆಗಳಿಗೆ ಪೂರಕವಾದ ಮೂಲಸೌಕರ್ಯ ಮತ್ತು ಹೂಡಿಕೆ ಸ್ನೇಹಿ ವಾತಾವರಣ ರಾಜ್ಯದಲ್ಲಿದ್ದು, ಜಪಾನ್‌ನ ಉದ್ಯಮಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪಾಟೀಲ್ ತಿಳಿಸಿದರು.

ಜಪಾನ್‌ನ ಉದ್ಯಮಗಳೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮೂಲಕ ನಾವೀನ್ಯತೆ, ತಂತ್ರಜ್ಞಾನ ವಿನಿಮಯ ಮತ್ತು ಹೊಸ ಹೂಡಿಕೆಗಳಿಗೆ ಉತ್ತೇಜನ ನೀಡುವ ಆಶಯವನ್ನು ವ್ಯಕ್ತಪಡಿಸಿದರು. ಇಂತಹ ಸಹಭಾಗಿತ್ವದಿಂದ ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ವೇಗ ದೊರೆಯುವುದರ ಜತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Author

ANU News

Follow Me
Other Articles
Previous

ಶೃಂಗೇರಿಯಲ್ಲಿ ಏಕರೂಪ ಆಚರಣಾ ಸಂಹಿತೆ, ಸಾಮಾನ್ಯ ಸಂಸ್ಕಾರ ಶಿಕ್ಷಣ ಯೋಜನೆಗಳ ಲೋಕಾರ್ಪಣೆ

Next

Karnataka Woos Japanese Investment in Semiconductors, Electronics and Robotics

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೌಕಾಪಡೆಯ ‘ಸ್ವಾವ್ಲಂಬನ್–2026’ ವಿಚಾರ ಸಂಕಿರಣ: ಎಐ, ಕ್ವಾಂಟಮ್ ತಂತ್ರಜ್ಞಾನಕ್ಕೆ ಒತ್ತು
    • ಬೆಂಗಳೂರಿನಲ್ಲಿ ಅಕ್ರಮ ಸಿಮ್ ಬಾಕ್ಸ್ ಜಾಲ ಭೇದಿಸಿದ ಪೊಲೀಸರು; ಮಹಾರಾಷ್ಟ್ರದಲ್ಲಿ ನಾಲ್ವರು ಬಂಧನ
    • Venugopal Alleges Targeted Attacks on Minorities, Seeks Strict Action Over Bengal Incident
    • ಡಿಜಿಟಲ್ ಕೃಷಿ ಮಿಷನ್: ಗಡುವಿಗೆ ಐದು ತಿಂಗಳು ಮುನ್ನವೇ 11 ಕೋಟಿ ರೈತ ಗುರುತಿನ ಚೀಟಿ ಸೃಷ್ಟಿ
    • India Creates 11 Crore Farmer IDs Five Months Ahead of Deadline: Shivraj Singh Chouhan
    Copyright 2026 — ANU News. All rights reserved. Blogsy WordPress Theme