Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

By ANU News
August 30, 2026 1 Min Read
0

ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವೈಭವದಿಂದ ನಡೆಯುತ್ತಿದೆ.

ಚಾತುರ್ಮಾಸ್ಯದ ಅಂಗವಾಗಿ ಸ್ವಾಮೀಜಿಯವರು ಗೋಪೂಜೆ ನೆರವೇರಿಸಿದರು. ಬಳಿಕ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಹಯಗ್ರೀವ ಜಯಂತಿಯನ್ನು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶ್ರೀಚಕ್ರ ಪೂಜೆಯೊಂದಿಗೆ ಸ್ವಾಮೀಜಿಯವರಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ವಿದ್ವಾನ್ ಪ್ರಜ್ವಲ್ ರಂಗರಾಜು ಹಾಗೂ ತಂಡದಿಂದ ಪೂರ್ಣಿಮಾ ಸಂಗೀತ ಸೇವೆ ನಡೆಯಿತು. ಬಳಿಕ ಪವಮಾನ ಹೋಮ ಹಾಗೂ ಪೂರ್ಣಾಹುತಿ ನೆರವೇರಿತು.

ಸಂಜೆ ಪೌಂಡರೀಕ ಮಂಟಪದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ‘ವಿಷ್ಣುಪುರಾಣ’ ಕಥಾ ಮಾಲಿಕೆಯ ಕುರಿತು ಪ್ರವಚನ ನೀಡಿದರು. ವಿಷ್ಣುಪುರಾಣದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಭಕ್ತರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ ಆಗಮಿಸಿ ಸ್ವಾಮೀಜಿಯವರ ಪ್ರವಚನವನ್ನು ಆಲಿಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತಿಭಾವದಲ್ಲಿ ತಲ್ಲೀನರಾದರು.

Author

ANU News

Follow Me
Other Articles
Previous

ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ

Next

Mysuru Ganapathy Sachchidananda Ashram hosts grand Chaturmasya celebrations of Datta Vijayananda Teertha

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Mysuru Ganapathy Sachchidananda Ashram hosts grand Chaturmasya celebrations of Datta Vijayananda Teertha
    • ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ
    • ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ
    • Grandmothers’ Day at Hanur school celebrates special bond between grandparents and grandchildren
    • ‘Annabrahma Chaturmasya’ in Gokarna: Mind, ‘ojas’ vital to keep body functioning, says Raghaveshwara Sri
    Copyright 2026 — ANU News. All rights reserved. Blogsy WordPress Theme