Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಶಕುಂತಳಾ ಶೆಟ್ಟಿ ಅವರ ಆತ್ಮಕಥನ ಸಮಾಜಕ್ಕೆ ವಿವೇಕ ನೀಡಿದೆ: ನರೇಂದ್ರ ರೈ ದೇರ್ಲ

By ANU News
November 6, 2026 1 Min Read
Comments Off on ಶಕುಂತಳಾ ಶೆಟ್ಟಿ ಅವರ ಆತ್ಮಕಥನ ಸಮಾಜಕ್ಕೆ ವಿವೇಕ ನೀಡಿದೆ: ನರೇಂದ್ರ ರೈ ದೇರ್ಲ

ಮಂಗಳೂರು: ಸಾಮಾಜಿಕ ನ್ಯಾಯವನ್ನು ನೆಲಮಟ್ಟದಿಂದ ಬೆಳೆದು ಬಂದ ರಾಜಕಾರಣಿಯಿಂದ ಮಾತ್ರ ಪರಿಣಾಮಕಾರಿಯಾಗಿ ಒದಗಿಸಲು ಸಾಧ್ಯ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಅಂತಹ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮ ಆತ್ಮಕಥನಗಳಲ್ಲಿ ನೈತಿಕತೆಗೆ ಆದ್ಯತೆ ನೀಡಿರುವ ಅವರು, ಸಮಾಜಕ್ಕೆ ವಿವೇಕ ನೀಡುವ ಕೃತಿಗಳನ್ನು ರಚಿಸಿದ್ದಾರೆ ಎಂದು ಲೇಖಕ ನರೇಂದ್ರ ರೈ ದೇರ್ಲ ಹೇಳಿದರು.

ಮಂಗಳೂರು ತುಳು ಭವನದಲ್ಲಿ ಗುರುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರಾವಳಿ ಲೇಖಕಿಯರ ಸಂಘ ಹಾಗೂ ಆಕೃತಿ ಆಶಯ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಶಕುಂತಳಾ ಶೆಟ್ಟಿ ಅವರ ‘ತುಳುವೆರೆ ತಿಂಗೊಲ್ದ ಪೊಲಬು’ ಮತ್ತು ‘ಚಿತ್ತ ಭಿತ್ತಿಯ ಪತ್ತಾಯ’ ಆತ್ಮಕಥನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃತಿಗಳಲ್ಲಿ ಮಹಿಳೆಯರ ನೋವು, ಸಂಕಟ ಮತ್ತು ನೈತಿಕ ಮೌಲ್ಯಗಳ ಕುರಿತ ವಿಚಾರಗಳು ವ್ಯಕ್ತವಾಗಿವೆ. ಕಾಲ್ನಡಿಗೆಯಿಂದ ರಾಜಕೀಯ ಜೀವನ ಆರಂಭಿಸಿದ ಶಕುಂತಳಾ ಶೆಟ್ಟಿ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದ್ದಾರೆ. ರಾಜಕೀಯದ ಕುತೂಹಲಕಾರಿ ಘಟನೆಗಳಿಗಿಂತಲೂ ಸಮಾಜಕ್ಕೆ ಅಗತ್ಯವಾದ ವಿವೇಕವನ್ನು ಕೃತಿಗಳು ನೀಡುತ್ತವೆ ಎಂದು ದೇರ್ಲ ಅಭಿಪ್ರಾಯಪಟ್ಟರು.

ತುಳುವಿನ ಅಪರೂಪದ ಪದಗಳ ಬಳಕೆ

‘ತುಳುವೆರೆ ತಿಂಗೊಲ್ದ ಪೊಲಬು’ ಕೃತಿಯನ್ನು ಪರಿಚಯಿಸಿದ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಕೃತಿಯಲ್ಲಿ ತುಳುವಿನ ಅಪರೂಪದ ಪದಗಳನ್ನು ಬಳಸಲಾಗಿದೆ. ತುಳುನಾಡಿನ ಮಾಸಿಕ ಆಚರಣೆಗಳನ್ನು ಸರಳವಾಗಿ ವಿವರಿಸಲಾಗಿದೆ ಎಂದರು.

ಕೃತಿಕಾರ್ತಿ ಶಕುಂತಳಾ ಶೆಟ್ಟಿ ಮಾತನಾಡಿ, ಶಾಲಾ ದಿನಗಳಲ್ಲಿ ಕವನಗಳನ್ನು ಬರೆಯುತ್ತಿದ್ದೆ. ಮದುವೆಯ ಬಳಿಕ ಬರವಣಿಗೆ ನಿಂತಿತ್ತು. ಯುವಜನ ಮೇಳ ಮತ್ತು ಆಕಾಶವಾಣಿಯ ಮೂಲಕ ಮತ್ತೆ ಬರವಣಿಗೆ ಆರಂಭಿಸಿದೆ. ರಾಜಕೀಯ ಪ್ರವೇಶದ ಬಳಿಕ ಅದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಬರವಣಿಗೆ ಮುಂದುವರಿಸಿದ್ದೇನೆ ಎಂದು ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಉಪಸ್ಥಿತರಿದ್ದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಬೂಬ ಪೂಜಾರಿ ಸ್ವಾಗತಿಸಿ, ವಂದಿಸಿದರು.

Author

ANU News

Follow Me
Other Articles
Previous

DRDO Successfully Flight-Tests Pralay Quasi-Ballistic Missile Off Odisha Coast

Next

ದೇವರಬೆಳಕೆರೆ, ಭೈರನಪಾದ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಸಿಎಂಗೆ ರೈತರ ಮನವಿ

Recent Posts

  • ದೇವರಬೆಳಕೆರೆ, ಭೈರನಪಾದ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಸಿಎಂಗೆ ರೈತರ ಮನವಿ
  • ಶಕುಂತಳಾ ಶೆಟ್ಟಿ ಅವರ ಆತ್ಮಕಥನ ಸಮಾಜಕ್ಕೆ ವಿವೇಕ ನೀಡಿದೆ: ನರೇಂದ್ರ ರೈ ದೇರ್ಲ
  • DRDO Successfully Flight-Tests Pralay Quasi-Ballistic Missile Off Odisha Coast
  • ಎಲೆಕ್ಷನ್ ಕಮಿಷನ್ ಈಗ ‘ಸೆಲೆಕ್ಷನ್ ಕಮಿಷನ್’ ಆಗಿದೆ: ಜ್ಞಾನೇಶ್ ರಾಜೀನಾಮೆ ನೀಡುವವರೆಗೂ ಹೋರಾಟದ ಎಚ್ಚರಿಕೆ
  • Ronaldo Retires from International Football, Ends 23-Year Journey With Portugal
Copyright 2026 — ANU News. All rights reserved. Blogsy WordPress Theme