Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಿಎಂ ಸಂಧಾನ ಸಭೆ ವಿಫಲ ಹಿನ್ನೆಲೆ; ಮುಂದುವರಿದ ಆಶಾ ಕಾರ್ಯಕರ್ತೆಯರ ಸತ್ಯಾಗ್ರಹ, ಲಿಖಿತ ಆದೇಶಕ್ಕೆ ಪಟ್ಟು

By ANU News
November 29, 2026 1 Min Read
Comments Off on ಸಿಎಂ ಸಂಧಾನ ಸಭೆ ವಿಫಲ ಹಿನ್ನೆಲೆ; ಮುಂದುವರಿದ ಆಶಾ ಕಾರ್ಯಕರ್ತೆಯರ ಸತ್ಯಾಗ್ರಹ, ಲಿಖಿತ ಆದೇಶಕ್ಕೆ ಪಟ್ಟು

ಬೆಂಗಳೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ 13ನೇ ದಿನವೂ ಮುಂದುವರಿದಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆಗೆ ಒಪ್ಪದ ಕಾರ್ಯಕರ್ತೆಯರು, ಸರ್ಕಾರದಿಂದ ಲಿಖಿತ ಆದೇಶ ಹೊರಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಭರವಸೆ ನೀಡಿ ಸರ್ಕಾರ ಮೋಸ ಮಾಡಿದೆ. ಹೀಗಾಗಿ ಈ ಬಾರಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ಆಶಾ ಕಾರ್ಯಕರ್ತೆಯರ ಹೋರಾಟದ ನೇತೃತ್ವ ವಹಿಸಿರುವ ಡಿ. ನಾಗಲಕ್ಷ್ಮಿ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಮಾತೇ ಲಿಖಿತ ಎಂದು ಹೇಳಿರುವುದಾಗಿ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

Author

ANU News

Follow Me
Other Articles
Previous

5.0-Magnitude Quake Off California Coast Triggers Panic at Los Angeles Airport

Next

Karnataka ASHA Workers’ Protest Continues for 13th Day as Talks with CM Fail

Recent Posts

  • Karnataka ASHA Workers’ Protest Continues for 13th Day as Talks with CM Fail
  • ಸಿಎಂ ಸಂಧಾನ ಸಭೆ ವಿಫಲ ಹಿನ್ನೆಲೆ; ಮುಂದುವರಿದ ಆಶಾ ಕಾರ್ಯಕರ್ತೆಯರ ಸತ್ಯಾಗ್ರಹ, ಲಿಖಿತ ಆದೇಶಕ್ಕೆ ಪಟ್ಟು
  • 5.0-Magnitude Quake Off California Coast Triggers Panic at Los Angeles Airport
  • ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ
  • BJP Challenges Rahul Gandhi to Resign Over ‘Illegitimate’ Election Remark
Copyright 2026 — ANU News. All rights reserved. Blogsy WordPress Theme