Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ

By ANU News
November 29, 2026 1 Min Read
Comments Off on ಲಾಸ್ ಏಂಜಲೀಸ್‌ನಲ್ಲಿ 5.0 ತೀವ್ರತೆಯ ಭೂಕಂಪ

ಲಾಸ್ ಏಂಜಲೀಸ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಶನಿವಾರ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದೆ. ಮ್ಯಾನ್‌ಹ್ಯಾಟನ್ ಬೀಚ್ ಕರಾವಳಿಯಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಕಂಪದ ಪರಿಣಾಮ ವಿಮಾನ ನಿಲ್ದಾಣದ ಟರ್ಮಿನಲ್ ಕಿಟಕಿಗಳು ಒಡೆದು, ಸೀಲಿಂಗ್‌ನ ಕೆಲವು ಭಾಗಗಳು ಕುಸಿದಿವೆ. ಸುರಕ್ಷತಾ ತಪಾಸಣೆಗಾಗಿ ವಿಮಾನಗಳ ಲ್ಯಾಂಡಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನೂ ತಡೆಹಿಡಿಯಲಾಗಿತ್ತು.

ಎಲ್ ಸೆಗುಂಡೊದ ಚೆವ್ರಾನ್ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡರೂ, ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ ಕಾರ್ಯನಿರ್ವಹಿಸಿದ್ದರಿಂದ ಸಾರ್ವಜನಿಕರಿಗೆ ಅಪಾಯವಿಲ್ಲ ಎಂದು ಕಂಪನಿ ತಿಳಿಸಿದೆ.

ಭೂಕಂಪದ ಬಳಿಕ 40ಕ್ಕೂ ಹೆಚ್ಚು ಪಶ್ಚಾತ್ ಕಂಪನಗಳು ದಾಖಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ಮತ್ತು ಮೂಲಸೌಕರ್ಯಗಳ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಾವು-ನೋವು, ದೊಡ್ಡ ಪ್ರಮಾಣದ ಹಾನಿ ಅಥವಾ ಸುನಾಮಿ ಅಪಾಯ ವರದಿಯಾಗಿಲ್ಲ.

Author

ANU News

Follow Me
Other Articles
Previous

5.0-Magnitude Quake Off California Coast Triggers Panic at Los Angeles Airport

Next

ಸಿಎಂ ಸಂಧಾನ ಸಭೆ ವಿಫಲ ಹಿನ್ನೆಲೆ; ಮುಂದುವರಿದ ಆಶಾ ಕಾರ್ಯಕರ್ತೆಯರ ಸತ್ಯಾಗ್ರಹ, ಲಿಖಿತ ಆದೇಶಕ್ಕೆ ಪಟ್ಟು

Recent Posts

  • Mangaluru MP Brijesh Chouta Seeks Fast-Track Clearances for Devadari Mine to Revive KIOCL
  • ಕೆಐಒಸಿಎಲ್ ಪುನಶ್ಚೇತನಕ್ಕೆ ದೇವದಾರಿ ಗಣಿ ಅನುಮತಿ ತ್ವರಿತಗೊಳಿಸಿ: ಸಂಸದ ಚೌಟ ಆಗ್ರಹ!
  • India Beat China 3-1 to Clinch Fourth Women’s Asian Champions Trophy Title
  • ಚೀನಾವನ್ನು ಮಣಿಸಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ವನಿತೆಯರು
  • 13 Killed as SUV Carrying Devotees to Rajrappa Temple Crashes in Jharkhand
Copyright 2026 — ANU News. All rights reserved. Blogsy WordPress Theme