ದೀಪತ್ತೂಣ್ ವಿವಾದ: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಗೆ ಕಾರಣವೇನು? ಕೋಮು ಓಲೈಕೆ ರಾಜಕಾರಣವೇ? ರಾಮ್ ಮಾಧವ್ ಪ್ರಶ್ನೆ
ಚೆನ್ನೈ: ತಮಿಳುನಾಡಿನ ದೀಪತ್ತೂಣ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮ್ ಮಾಧವ್, ಟಿವಿಕೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯವೈಖರಿ ಕುರಿತು ವಿಜಯ್ ಅವರಿಗೆ ಅನುಭವದ ಕೊರತೆ ಇರಬಹುದು. ಈ ಕಾರಣದಿಂದಲೇ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿರಬಹುದು ಎಂದು ಅವರು ಟೀಕಿಸಿದ್ದಾರೆ.

ಸುಪ್ರೀಂ ಕೋರ್ಟ್ ಕೂಡ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಲು ಕಾರಣವೇನು ಎಂದು ಸರ್ಕಾರ ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದೆ ಎಂದು ರಾಮ್ ಮಾಧವ್ ಹೇಳಿದ್ದಾರೆ.
ಪೌರ್ಣಮಿಯಂದು ಪವಿತ್ರ ದೀಪತ್ತೂಣ್ ಸಮಾರಂಭವನ್ನು ತಡೆಯಲು ಕಾರಣವೇನು ಎಂದು ಪ್ರಶ್ನಿಸಿರುವ ಅವರು, ವಿಜಯ್ ಸರ್ಕಾರದ ನಡೆ ಕೋಮು ಓಲೈಕೆ ರಾಜಕಾರಣದ ಪ್ರಯತ್ನ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ಅಕ್ರಮಗಳು ಸರಿಯಾಗಿವೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.