ಉಡುಪಿ ಸೋದೆ ಮಠದ ‘ಕದಳೀ ವಿಶ್ವದರ್ಶನ’: ಬಾಳೆ ಮುಹೂರ್ತ ಕೃಷಿ, ಸಂಸ್ಕೃತಿ, ಜ್ಞಾನದ ಮಹಾಸಂಗಮ ಎಂದ ಹೆಚ್.ಡಿ. ಕುಮಾರಸ್ವಾಮಿ
ಉಡುಪಿ: ಬಾಳೆಯ ಪಾವಿತ್ರ್ಯತೆ ಮತ್ತು ಮಹತ್ವವನ್ನು ಸಾರುವ ‘ಬಾಳೆ ಮುಹೂರ್ತ; ಕದಳೀ ವಿಶ್ವದರ್ಶನ’ ಕಾರ್ಯಕ್ರಮ ಕೃಷಿ, ಸಂಸ್ಕೃತಿ ಹಾಗೂ ಜ್ಞಾನದ ಮಹಾಸಂಗಮವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಉಡುಪಿಯ ಶ್ರೀ ಸೋದೆ ವಾದಿರಾಜ ಮಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ದಿವ್ಯ ಸಂಕಲ್ಪದಿಂದ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮ ಜ್ಞಾನದ ಕಣಜದಂತಿದೆ ಎಂದರು.

ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರ ಶ್ರೀಪಾದರು ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ಶಾಸಕ ಯಶಪಾಲ್ ಸುವರ್ಣ, ದಕ್ಷಿಣ ಭಾರತದ ಇಸ್ರೇಲ್ ಉಪ ರಾಯಭಾರಿ ಡಾ. ಮ್ಯಾಕ್ಸಿಮ್ ಶಮೈಗನ್, ಕೃಷಿ ತಜ್ಞ ಪಡ್ರೆ ಸೇರಿದಂತೆ ಗಣ್ಯರು ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.