Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಆ.24ರೊಳಗೆ ಡಿಸಿಸಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪೂರ್ಣ: ಕೆ.ಸಿ. ವೇಣುಗೋಪಾಲ್

By ANU News
July 25, 2026 1 Min Read
0

ಬೆಂಗಳೂರು: ಕಾಂಗ್ರೆಸ್‌ನ ಸಂಘಟನೆ ಬಲಪಡಿಸುವ ಉದ್ದೇಶದಿಂದ ದೇಶಾದ್ಯಂತ ನಡೆಯುತ್ತಿರುವ ‘ಸಂಘಟನ್ ಸೃಜನ್’ ಅಭಿಯಾನದ ಅಂಗವಾಗಿ ಕರ್ನಾಟಕದಲ್ಲಿ ಆಗಸ್ಟ್ 24ರೊಳಗೆ ಜಿಲ್ಲಾ ಕಾಂಗ್ರೆಸ್ (ಡಿಸಿಸಿ) ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಇಂದಿರಾ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬೆಳಗಾವಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಪಕ್ಷವನ್ನು ಬೂತ್ ಮಟ್ಟದಿಂದ ಪಿಸಿಸಿ ಮಟ್ಟದವರೆಗೆ ಬಲಪಡಿಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.

ದೇಶದ 1,054 ಜಿಲ್ಲೆಗಳ ಪೈಕಿ 762 ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪೂರ್ಣಗೊಂಡಿದೆ. ಜಿಲ್ಲಾಧ್ಯಕ್ಷರ ನೇಮಕದ ಬಳಿಕ ಡಿಸಿಸಿ, ಬ್ಲಾಕ್, ಮಂಡಲ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕದ 40 ಜಿಲ್ಲೆಗಳಿಗೆ ಕಾಂಗ್ರೆಸ್‌ನ ಹಿರಿಯ ನಾಯಕರು, ಸಂಸದರು, ಮಾಜಿ ಸಚಿವರು ಹಾಗೂ ಶಾಸಕರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಅವರು ಜಿಲ್ಲೆಗಳಲ್ಲಿ ಕನಿಷ್ಠ ಏಳು ದಿನ ವಾಸ್ತವ್ಯ ಹೂಡಿ ಕಾರ್ಯಕರ್ತರು, ಸ್ಥಳೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಅಧ್ಯಕ್ಷರ ಹೆಸರನ್ನು ಶಿಫಾರಸು ಮಾಡಲಿದ್ದಾರೆ. ಬಳಿಕ ಪಿಸಿಸಿ ನಾಯಕತ್ವ, ಸಿಡಬ್ಲ್ಯೂಸಿ ಸದಸ್ಯರು, ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅಂತಿಮ ಆಯ್ಕೆ ನಡೆಯಲಿದೆ ಎಂದರು.

ಶೇ.50 ಜಿಲ್ಲೆಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಾಯಕರಿಗೆ ಶೇ.50ರಷ್ಟು ಪ್ರತಿನಿಧಿತ್ವ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಪ್ರತಿ ಜಿಲ್ಲೆಯಿಂದ ಕನಿಷ್ಠ ಆರು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ. ಅಂತಿಮ ಆಯ್ಕೆ ಬಳಿಕವೂ ಅಧ್ಯಕ್ಷರ ಕಾರ್ಯವೈಖರಿ, ಸಂಘಟನಾ ಸಾಮರ್ಥ್ಯ ಮತ್ತು ಸಾಧನೆಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

Author

ANU News

Follow Me
Other Articles
Previous

Congress seeks high-level inquiry into student protest crackdown amid NEET row

Next

Congress sets August 24 deadline for appointing DCC chiefs in Karnataka

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Prashanth Neel-presented horror film ‘418’ gets A certificate after CBFC raises concerns over scary scenes
    • Kareena Kapoor flags Bollywood’s lack of originality, says hit formulas won’t make great films
    • ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್
    • ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ
    • SC rejects Abu Salem’s plea for early release, says 25 years complete in 2030
    Copyright 2026 — ANU News. All rights reserved. Blogsy WordPress Theme