Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ; 183.50 ರೂ. ಕಡಿತ

By ANU News
July 1, 2026 1 Min Read
0

ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಕೇಂದ್ರ ತೈಲ ಕಂಪನಿಗಳು 183.50 ರೂಪಾಯಿ ಕಡಿತ ಘೋಷಿಸಿವೆ. ಪರಿಷ್ಕೃತ ದರಗಳು ಜುಲೈ 1ರಿಂದಲೇ ಜಾರಿಗೆ ಬಂದಿದ್ದು, ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ಬಳಕೆದಾರರಿಗೆ ಇದರಿಂದ ಆರ್ಥಿಕ ನಿರಾಳತೆ ದೊರೆಯಲಿದೆ.

ಇತ್ತೀಚಿನ ಬೆಲೆ ಕಡಿತದ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವು 3,021 ರೂಪಾಯಿಯಿಂದ 2,930 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಈ ಸಿಲಿಂಡರ್ ಬೆಲೆ 3,198 ರೂಪಾಯಿವರೆಗೆ ಏರಿಕೆಯಾಗಿತ್ತು.

ಅಮೆರಿಕಾ–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಅನಿಶ್ಚಿತತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಪೂರೈಕೆ ವ್ಯತ್ಯಯದಿಂದ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು.

ತೈಲ ಕಂಪನಿಗಳು ಮಾರ್ಚ್‌ನಲ್ಲಿ 144 ರೂ., ಏಪ್ರಿಲ್‌ನಲ್ಲಿ 195.50 ರೂ., ಮೇ ತಿಂಗಳಲ್ಲಿ 993 ರೂ. ಹಾಗೂ ಜೂನ್‌ನಲ್ಲಿ 42 ರೂ. ಹೆಚ್ಚಳ ಮಾಡಿದ್ದವು. ಹೀಗೆ ನಾಲ್ಕು ಹಂತಗಳಲ್ಲಿ ಒಟ್ಟಾರೆ 1,374.50 ರೂಪಾಯಿಗಳಷ್ಟು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು.

ಈಗ 183.50 ರೂಪಾಯಿ ಕಡಿತದೊಂದಿಗೆ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಕಚ್ಚಾತೈಲ ಬೆಲೆ ಮತ್ತು ಪೂರೈಕೆ ಪರಿಸ್ಥಿತಿಯನ್ನು ಆಧರಿಸಿ ಮತ್ತಷ್ಟು ದರ ಪರಿಷ್ಕರಣೆ ಸಾಧ್ಯತೆ ಇದೆ.

Author

ANU News

Follow Me
Other Articles
Previous

23 Parties Write to CJI Over Election Commission’s SIR Process

Next

Commercial LPG cylinder price cut by Rs 183.50 from July 1, offers relief to businesses

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘What does caste certificate have to do with free electricity?’: JD(S) targets Karnataka govt over Gruha Jyothi verification
    • ‘ಗೃಹಜ್ಯೋತಿ ಕರೆಂಟಿಗೂ ಜಾತಿ ಪ್ರಮಾಣಕ್ಕೂ ಏನು ಸಂಬಂಧ?’; ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಸ್ತ್ರ
    • No BJP leaders in Ayodhya trust, Congress making false allegations: CT Ravi
    • ಅಯೋಧ್ಯೆ ಟ್ರಸ್ಟ್ ನಲ್ಲಿ ಬಿಜೆಪಿ ನಾಯಕರು ಇಲ್ಲ, ಆದರೂ ಕಾಂಗ್ರೆಸ್ ನಾಯಕರಿಂದ ಸುಳ್ಳು ಆರೋಪ; ಸಿ.ಟಿ.ರವಿ ಆಕ್ರೋಶ
    • ಗೃಹಲಕ್ಷ್ಮಿ ಹಣ ಅಕ್ರಮ ಆರೋಪ; ಸಿಎಜಿ ವರದಿ ಸಂಬಂಧ ವಿಶೇಷ ತನಿಖೆಗೆ ಸಿ.ಟಿ.ರವಿ ಆಗ್ರಹ
    Copyright 2026 — ANU News. All rights reserved. Blogsy WordPress Theme