Skip to content
ANU News
ANU News
  • Home
  • Home
ANU News
ANU News
  • Home
  • Home
ವಿದೇಶ

ಐಸ್ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಕಮಾಲ್: ದಶೇರಿ, ಚೌಸಾ, ಲ್ಯಾಂಗ್ರಾ , ಕೇಸರ್ ಹಣ್ಣುಗಳೇ ಫಿದಾ

By ANU News
June 26, 2026 1 Min Read
0

ರೇಕ್‌ಜಾವಿಕ್: ಭಾರತ ಮೊದಲ ಬಾರಿಗೆ ಐಸ್ಲ್ಯಾಂಡ್‌ನಲ್ಲಿ ತನ್ನ ಮಾವಿನ ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಿದೆ. Embassy of India in Reykjavik ಹಾಗೂ APEDA ಸಹಯೋಗದಲ್ಲಿ ಜೂನ್ 24 ಮತ್ತು 25ರಂದು Reykjavik ಮತ್ತು Akureyriಗಳಲ್ಲಿ ಭಾರತೀಯ ಮಾವಿನ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಗಳಲ್ಲಿ ದಶೇರಿ, ಚೌಸಾ, ಲ್ಯಾಂಗ್ರಾ ಮತ್ತು ಕೇಸರ್ ಸೇರಿದಂತೆ ಪ್ರೀಮಿಯಂ ಭಾರತೀಯ ಮಾವಿನ ಪ್ರಭೇದಗಳನ್ನು ಪ್ರದರ್ಶಿಸಲಾಗಿದ್ದು, ಐಸ್ಲ್ಯಾಂಡ್‌ನ ಆಮದುದಾರರು, ರಾಜತಾಂತ್ರಿಕರು ಹಾಗೂ ವ್ಯಾಪಾರ ವಲಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಭಾರತೀಯ ರಾಯಭಾರಿ ಆರ್. ರವೀಂದ್ರ ಅವರು ಭಾರತೀಯ ಮಾವಿನ ವಿಶಿಷ್ಟ ಸುವಾಸನೆ ಹಾಗೂ ಉನ್ನತ ಗುಣಮಟ್ಟವನ್ನು ಉಲ್ಲೇಖಿಸಿ, ಐಸ್ಲ್ಯಾಂಡ್ ಮಾರುಕಟ್ಟೆಯಲ್ಲಿ ರಫ್ತು ವಿಸ್ತರಣೆಗೆ ಮಹತ್ವದ ಅವಕಾಶಗಳಿವೆ ಎಂದು ಹೇಳಿದರು.

ಐಸ್ಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪಾರ ಒಪ್ಪಂದಗಳ ನಿರ್ದೇಶಕ ಸ್ವೀನ್ ಕೆ. ಐನಾರ್ಸನ್, ಭಾರತ–ಇಎಫ್‌ಟಿಎ ವ್ಯಾಪಾರ ಹಾಗೂ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತೀಯ ಮಾವಿನ ಆಮದು ಹೆಚ್ಚಲು ಹೊಸ ದಾರಿಗಳು ತೆರೆಯಬಹುದು ಎಂದು ಅಭಿಪ್ರಾಯಪಟ್ಟರು. ಐಸ್ಲ್ಯಾಂಡ್ ಫೆಡರೇಶನ್ ಆಫ್ ಟ್ರೇಡ್‌ನ ಪ್ರಧಾನ ಕಾರ್ಯದರ್ಶಿ ಓಲಾಫರ್ ಸ್ಟೀಫನ್ಸೆನ್, ಭಾರತದಲ್ಲಿ ವ್ಯಾಪಾರ ಆಸಕ್ತಿ ಹೆಚ್ಚುತ್ತಿರುವುದನ್ನು ಸೂಚಿಸಿ, ಭಾರತೀಯ ಕೃಷಿ ಉತ್ಪನ್ನಗಳಿಗೆ ಭವಿಷ್ಯ ಉಜ್ವಲವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎರಡನೇ ಕಾರ್ಯದರ್ಶಿ ಅನಿಶಾ ತೋಮರ್, ವಿಶ್ವದ ಅತಿದೊಡ್ಡ ಮಾವು ಉತ್ಪಾದಕ ರಾಷ್ಟ್ರವಾಗಿ ಭಾರತದ ಸ್ಥಾನಮಾನವನ್ನು ಎತ್ತಿ ತೋರಿಸಿದರು. ಗುಣಮಟ್ಟದ ಭರವಸೆ, ಮಾರುಕಟ್ಟೆ ಪ್ರವೇಶ ಮತ್ತು ಸರ್ಕಾರದ ವಿವಿಧ ಉಪಕ್ರಮಗಳ ಮೂಲಕ ಮಾವಿನ ರಫ್ತು ಹೆಚ್ಚಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನೂ ವಿವರಿಸಿದರು.

ಪ್ರಸ್ತುತ ಐಸ್ಲ್ಯಾಂಡ್ ಮುಖ್ಯವಾಗಿ ಥೈಲ್ಯಾಂಡ್, ಬ್ರೆಜಿಲ್ ಹಾಗೂ ಪೆರುವಿನಿಂದ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, 2025ರಲ್ಲಿ ಒಟ್ಟು ಆಮದು ಮೌಲ್ಯ ಸುಮಾರು 3.3 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿತ್ತು. ಸ್ಥಳೀಯ ಗ್ರಾಹಕರಿಂದ, ವಿಶೇಷವಾಗಿ ಸ್ಮೂಥಿ ಮತ್ತು ಸಿಹಿತಿಂಡಿಗಳ ಬಳಕೆಗೆ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಐಸ್ಲ್ಯಾಂಡ್ ಮಾರುಕಟ್ಟೆಯಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಸ್ಪಷ್ಟವಾದ ಭವಿಷ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Author

ANU News

Follow Me
Other Articles
Previous

Indian mangoes make debut in Iceland with promotion events in Reykjavik, Akureyri

Next

2024ರಿಂದ 21 ಬಾರಿ ಕೈಕೊಟ್ಟ ನಮ್ಮ ಮೆಟ್ರೋ; ಬಿಎಂಆರ್‌ಸಿಎಲ್‌ಗೆ ತೇಜಸ್ವಿ ಸೂರ್ಯ ತರಾಟೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • CM Vijay joins anti-drug awareness run, covers 6 km with participants in Chennai
    • ಮಾದಕ ದ್ರವ್ಯ ವಿರುದ್ಧ ಬೀದಿಗಿಳಿದ ಸಿಎಂ ದಳಪತಿ ವಿಜಯ್ : ಚೆನ್ನೈನಲ್ಲಿ 6 ಕಿ.ಮೀ ‘ಸ್ಟಾರ್ಟ್ ರನ್
    • Tejasvi Surya slams BMRCL over repeated Namma Metro disruptions, seeks answers
    • 2024ರಿಂದ 21 ಬಾರಿ ಕೈಕೊಟ್ಟ ನಮ್ಮ ಮೆಟ್ರೋ; ಬಿಎಂಆರ್‌ಸಿಎಲ್‌ಗೆ ತೇಜಸ್ವಿ ಸೂರ್ಯ ತರಾಟೆ
    • ಐಸ್ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಕಮಾಲ್: ದಶೇರಿ, ಚೌಸಾ, ಲ್ಯಾಂಗ್ರಾ , ಕೇಸರ್ ಹಣ್ಣುಗಳೇ ಫಿದಾ
    Copyright 2026 — ANU News. All rights reserved. Blogsy WordPress Theme