
ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ; ಚುನಾವಣಾ ಆಯೋಗ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ರಾಜಕೀಯ ಸಂಘರ್ಷ ತೀವ್ರಗೊಂಡಿದೆ.
ಮಂಗಳವಾರ ಸಂಜೆ ಭಾರತ ಚುನಾವಣಾ ಆಯೋಗ ಕಚೇರಿ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹಾಗೂ ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಗೆ ಪೂರ್ವಾನುಮತಿ ಇಲ್ಲದ ಕಾರಣ ಕೆಲ ನಾಯಕರನ್ನು ಕಚೇರಿಗೆ ಪ್ರವೇಶಿಸಲು ತಡೆಯಲಾಯಿತು.
Democracy cannot survive when constitutional institutions are reduced to instruments of political convenience.
The rejection of Congress Rajya Sabha candidate Meenakshi Natarajan ji's nomination from Madhya Pradesh raises serious questions about the fairness of our democratic… pic.twitter.com/E3BOYFo8CE
— Congress (@INCIndia) June 9, 2026
ಪ್ರತಿಭಟನೆಯಲ್ಲಿ ಕೆ.ಸಿ. ವೇಣುಗೋಪಾಲ್, ಭೂಪೇಶ್ ಬಘೇಲ್ ಹಾಗೂ ಸಚಿನ್ ಪೈಲಟ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇಣುಗೋಪಾಲ್, “ಇದು ಪ್ರಜಾಪ್ರಭುತ್ವದ ಮೂಲಭೂತ ಪ್ರಶ್ನೆ. ಚುನಾವಣಾ ಆಯೋಗದೊಂದಿಗೆ ಭೇಟಿಗೆ ಸಮಯ ಕೇಳಿದ್ದರೂ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ನಮಗೆ ನ್ಯಾಯ ಬೇಕು, ಅಗತ್ಯವಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ” ಎಂದು ಹೇಳಿದರು.
At 7:25 PM, we submitted a letter to the Election Commission of India seeking an appointment with the Election Commission to file a complaint.
Even after 40 minutes, we are not being allowed to meet them.
What is happening in this country? Is this a banana republic? We need… pic.twitter.com/1i1ePFoXbe
— Congress (@INCIndia) June 9, 2026
ಸಚಿನ್ ಪೈಲಟ್ ಮಾತನಾಡಿ, “ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಚಾರ್ಜ್‌ಶೀಟ್ ಇಲ್ಲ. ಆದರೂ ಯಾವುದೇ ಸಮರ್ಪಕ ಕಾರಣವಿಲ್ಲದೆ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನಾವು ಗೆಲ್ಲುವ ಸಾಧ್ಯತೆಯಿದ್ದ ಸ್ಥಾನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಪಿಸಿದರು.
ನಾಮಪತ್ರ ತಿರಸ್ಕಾರದ ಕಾರಣಗಳ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೇಳಿದ್ದು, ವಿಷಯವು ರಾಜಕೀಯ ಚರ್ಚೆಗೆ ಕಾರಣವಾಗಿದೆ.