Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ನೆಹರು ದಾಖಲೆ ಮೀರಿದ ಮೋದಿ; ನಿರಂತರ ಅಧಿಕಾರಾವಧಿಯಲ್ಲಿ ಹೊಸ ಮೈಲಿಗಲ್ಲು

By Anu News
June 10, 2026 1 Min Read
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಿರಂತರವಾಗಿ ಅತಿ ಹೆಚ್ಚು ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೋದಿ, 4,399 ದಿನಗಳ ನಿರಂತರ ಅಧಿಕಾರಾವಧಿ ಪೂರೈಸುವ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಈ ಮೂಲಕ ಕಳೆದ ಹಲವು ದಶಕಗಳಿಂದ ಅಚ್ಚಳಿಯದೆ ಉಳಿದಿದ್ದ ದಾಖಲೆಯೊಂದು ಮುರಿದಂತಾಗಿದೆ. ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಅಭಿವೃದ್ಧಿ, ಕಲ್ಯಾಣ ಯೋಜನೆಗಳು ಹಾಗೂ ‘ವಿಕಸಿತ ಭಾರತ 2047’ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ದೆಹಲಿಯ ಭಾರತ್ ಮಂಡಪಂನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಸಂವಾದ ಕಾರ್ಯಕ್ರಮ ಆಯೋಜಿಸಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಸಚಿವರು ಮತ್ತು ಹಿರಿಯ ನಾಯಕರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಎನ್‌ಡಿಎ ಸರ್ಕಾರದ 12 ವರ್ಷಗಳ ಸಾಧನೆಗಳು, ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಕುರಿತು ಚರ್ಚೆ ನಡೆಯಿತು.

Author

Anu News

Follow Me
Other Articles
Previous

ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ; ಚುನಾವಣಾ ಆಯೋಗ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

Next

ಜಿ-7 ಶೃಂಗಸಭೆ: ಪ್ರಧಾನಿ ಮೋದಿ ಜೂನ್ 13ರಿಂದ 18ರವರೆಗೆ ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Cars will fly’: Almora innovator Ravi Tamta tests flying car prototype
    • ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ !
    • ಗಾಯತ್ರಿ ಶಾಂತೇಗೌಡ ಹೆಸರು ಮುಂಚಿತವಾಗಿ ಪಟ್ಟಿಗೆ ಸೇರಿಸಿದ್ದು ತಪ್ಪು: ಯತೀಂದ್ರ
    • ‘ನಶಾ ಮುಕ್ತ ಭಾರತ’ ಸಂದೇಶದೊಂದಿಗೆ ಗಮನಸೆಳೆದ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’
    • Say yes to fitness, no to drugs: Mandaviya leads nationwide cycling drive
    Copyright 2026 — ANU News. All rights reserved. Blogsy WordPress Theme