Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಪರಿಷತ್ ಫೈಟ್‌ನಲ್ಲಿ ಬಿಜೆಪಿಗೆ ಕ್ರಾಸ್‌ವೋಟ್ ಶಾಕ್; ಮೈತ್ರಿಗೆ ಹಿನ್ನಡೆ

By Anu News
June 18, 2026 1 Min Read
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಡ್ಡಮತದಾನದ ಶಾಕ್ ಎದುರಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 7 ಸ್ಥಾನಗಳ ಪೈಕಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದರೆ, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಬಿ.ಎಸ್. ಶಿವಣ್ಣ ತಲಾ 30 ಮತ ಪಡೆದರೆ, ವಿನಯ್ ಕಾರ್ತಿಕ್ 32 ಮತಗಳೊಂದಿಗೆ ಗೆಲುವು ಸಾಧಿಸಿದರು.

ಬಿಜೆಪಿಯ ಆರ್. ರಘು 29 ಮತ ಹಾಗೂ ಲಿಂಗರಾಜು ಪಾಟೀಲ್ 27 ಮತ ಪಡೆದರು. ಗೆಲುವಿನ ಕೋಟಾ 27.63 ಮತಗಳಾಗಿದ್ದರಿಂದ ಲಿಂಗರಾಜು ಪಾಟೀಲ್ ನೇರವಾಗಿ ಆಯ್ಕೆಯಾಗಲಿಲ್ಲ. ಬಳಿಕ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರ ಮತಗಳ ವರ್ಗಾವಣೆಯಿಂದ ಗೆಲುವು ಸಾಧಿಸಿದರು.

ಇತ್ತ ಮೈತ್ರಿ ಅಭ್ಯರ್ಥಿಯಾಗಿದ್ದ ಗೋವಿಂದರಾಜು ಕೇವಲ 14 ಮತಗಳಿಗೆ ಸೀಮಿತರಾಗಿ ನಿರಾಸೆ ಅನುಭವಿಸಿದರು.

ಬಿಜೆಪಿ ಅಭ್ಯರ್ಥಿಗಳಿಗೆ ತಲಾ 28 ಮತಗಳನ್ನು ಖಚಿತಪಡಿಸುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ್ದರೂ, ಕೊನೆಯ ಕ್ಷಣದಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರದಿಂದ ಬಿಜೆಪಿ ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೂ ಅಡ್ಡಮತದಾನದ ಪರಿಣಾಮ ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ.

Author

Anu News

Follow Me
Other Articles
Previous

ಪರಿಷತ್ ಫೈಟ್’ನಲ್ಲಿ ಕಾಂಗ್ರೆಸ್‌ನ ಐವರ ದಿಗ್ವಿಜಯ, ಬಿಜೆಪಿಗೆ ಕ್ರಾಸ್ ವೋಟ್ ಶಾಕ್

Next

ತೆಲಂಗಾಣ ಸಚಿವ ಸಂಪುಟ ಇನ್ನು ಕಾಗದರಹಿತ: ಡಿಜಿಟಲ್ ಕ್ಯಾಬಿನೆಟ್ ವ್ಯವಸ್ಥೆಗೆ ಚಾಲನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme