Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಪರಿಷತ್ ಫೈಟ್’ನಲ್ಲಿ ಕಾಂಗ್ರೆಸ್‌ನ ಐವರ ದಿಗ್ವಿಜಯ, ಬಿಜೆಪಿಗೆ ಕ್ರಾಸ್ ವೋಟ್ ಶಾಕ್

By Anu News
June 18, 2026 1 Min Read
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಸಾಧನೆ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಗಳು 5 ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿದ್ದು, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದ್ದು, ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ಶಾಸಕರ ಅಡ್ಡಮತದಾನದಿಂದ ಫಲಿತಾಂಶ ಬದಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಬಿ.ಎಸ್. ಶಿವಣ್ಣ ತಲಾ 30 ಮತ ಪಡೆದರೆ, ವಿನಯ್ ಕಾರ್ತಿಕ್ 32 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಆರ್. ರಘು 29 ಮತ ಹಾಗೂ ಲಿಂಗರಾಜು ಪಾಟೀಲ್ 27 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತಗಳಿಗೆ ಸೀಮಿತರಾದರು.

ಗೆಲುವಿನ ಕೋಟಾ 27.63 ಮತಗಳಾಗಿದ್ದರಿಂದ ಲಿಂಗರಾಜು ಪಾಟೀಲ್ ನೇರವಾಗಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿಯ ಮತಗಳನ್ನು ಪರಿಗಣಿಸಿ ಲಿಂಗರಾಜು ಪಾಟೀಲ್ ಗೆಲುವು ಸಾಧಿಸಿದರು.

ಒಟ್ಟು 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದ್ದು, ಮತಪತ್ರದಲ್ಲಿ ಸಂಖ್ಯೆ ಸರಿಯಾಗಿ ನಮೂದಿಸದ ಕಾರಣ ತಿರಸ್ಕರಿಸಲಾಗಿದೆ.

ಈ ಫಲಿತಾಂಶ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಮತ್ತಷ್ಟು ಬಲ ನೀಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆಯಾಗಿದೆ.

Author

Anu News

Follow Me
Other Articles
Previous

ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ: 3.18 ಕೆಜಿ ಹೈಡ್ರೋ ಗಾಂಜಾ ವಶ, ಆರೋಪಿ ಬಂಧನ

Next

ಪರಿಷತ್ ಫೈಟ್‌ನಲ್ಲಿ ಬಿಜೆಪಿಗೆ ಕ್ರಾಸ್‌ವೋಟ್ ಶಾಕ್; ಮೈತ್ರಿಗೆ ಹಿನ್ನಡೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬ ಸಹಿಸುವುದಿಲ್ಲ: ಚಲುವರಾಯಸ್ವಾಮಿ
    • Bengaluru gets its first ‘Circular Textile Lab’ to turn textile waste into useful products
    • ಬೆಂಗಳೂರಿನ ಮೊದಲ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಲೋಕಾರ್ಪಣೆ
    • Horror, humour and a mysterious bus: Shine Shetty’s ‘Shankarabharana’ teaser unveiled
    • ಶೈನ್ ಶೆಟ್ಟಿಗೆ ಬಸ್ ಡ್ರೈವರ್ ಅವತಾರ; ‘ಶಂಕರಾಭರಣ’ ಟೀಸರ್ ರಿಲೀಸ್
    Copyright 2026 — ANU News. All rights reserved. Blogsy WordPress Theme