Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಉಚಿತ MRI ಸೌಲಭ್ಯಕ್ಕೆ ಒಪ್ಪಿಗೆ, ಕರಾವಳಿ ರಸ್ತೆ ಅಭಿವೃದ್ಧಿಗೆ ₹13 ಕೋಟಿ ಮಂಜೂರು

By ANU News
May 1, 2026 1 Min Read
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಕಳೆದ ಮಳೆಗಾಲದಲ್ಲಿ ಭಾರೀ ಹಾನಿಗೊಳಗಾದ ಪುತ್ತೂರು–ಬೆಳ್ತಂಗಡಿ ಸಂಪರ್ಕ ರಸ್ತೆವಾದ ಗುರುವಾಯನಕೆರೆ–ಉಪ್ಪಿನಂಗಡಿ (NH-118) ರಸ್ತೆಯ ಅಭಿವೃದ್ಧಿಗೆ ₹13 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ತುರ್ತು ಅಗತ್ಯ ಅರಿತು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಾಗಿದ್ದು, ಇದೀಗ ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರಿಂದ ಕರಾವಳಿ ಭಾಗದ ಜನರಿಗೆ ಸುಗಮ ಸಂಚಾರ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ, ರಾಜ್ಯದ ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ₹81 ಕೋಟಿ ವೆಚ್ಚದಲ್ಲಿ 6 ಜಿಲ್ಲಾ ಆಸ್ಪತ್ರೆಗಳಿಗೆ ಹೈ-ಟೆಕ್ MRI ಯಂತ್ರಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ.

MRI ಸೌಲಭ್ಯ ಪಡೆಯುವ ಜಿಲ್ಲೆಗಳು:

  • ದಾವಣಗೆರೆ
  • ಮೈಸೂರು
  • ಧಾರವಾಡ
  • ಬಾಗಲಕೋಟೆ
  • ಬೆಂಗಳೂರು ನಗರ
  • ರಾಮನಗರ

ಈ ಕ್ರಮದಿಂದ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದರ ಜೊತೆಗೆ ಬಡಜನರಿಗೆ ಉಚಿತ ವೈದ್ಯಕೀಯ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Author

ANU News

Follow Me
Other Articles
Previous

ಮರಾಠಿ ಭಾಷೆ ಹೆಸರಿನಲ್ಲಿ ಹಿಂಸಾಚಾರ ಬೇಡ: ‘ಮಹಾ’ ಜನತೆಗೆ ಸಿಎಂ ದೇವೇಂದ್ರ ಫಡ್ನವೀಸ್ ಕರೆ

Next

‘ಪರಿಮಳ & ಕೋ’ ಫಸ್ಟ್ ಲುಕ್ ರಿಲೀಸ್: ಪಾಂಡಿರಾಜ್ ಹೊಸ ಅವತಾರ

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • IOS SAGAR ಕಾರ್ಯಾಚರಣೆ ಯಶಸ್ವಿ; ಕೊಚ್ಚಿಗೆ ಮರಳಿದ ಐಎನ್‌ಎಸ್ ಸುನಯನ
  • (no title)
  • ಭಾರತ-ಇಟಲಿ ನಡುವೆ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ ಘೋಷಣೆ
  • ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ
  • ಹಣದುಬ್ಬರ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
Copyright 2026 — ANU News. All rights reserved. Blogsy WordPress Theme