Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

13 ದಿನಗಳ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ; ಮಾಸಿಕ ಗೌರವಧನ ₹11,500ಕ್ಕೆ ಏರಿಕೆ!

By ANU News
November 30, 2026 1 Min Read
Comments Off on 13 ದಿನಗಳ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ; ಮಾಸಿಕ ಗೌರವಧನ ₹11,500ಕ್ಕೆ ಏರಿಕೆ!

ಬೆಂಗಳೂರು: ಕಳೆದ 13 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಧರಣಿ ಹಿಂಪಡೆದಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ನಡೆದ ಅಂತಿಮ ಸುತ್ತಿನ ಮಾತುಕತೆ ಯಶಸ್ವಿಯಾಗಿದ್ದು, ರಾಜ್ಯ ಸರ್ಕಾರ ನೀಡುತ್ತಿದ್ದ ₹5,000 ಗೌರವಧನಕ್ಕೆ ಹೆಚ್ಚುವರಿಯಾಗಿ ₹2,000 ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದ ರಾಜ್ಯದ ಪಾಲು ₹7,000ಕ್ಕೆ ಏರಿಕೆಯಾಗಲಿದೆ. ಕೇಂದ್ರದ ₹2,000 ಹಾಗೂ ₹1,000 ಟೀಮ್ ಬೇಸ್ಡ್ ಇನ್ಸೆಂಟಿವ್ ಸೇರಿ ಜನವರಿ 2027ರಿಂದ ಮಾಸಿಕ ಒಟ್ಟಾರೆ ಮೊತ್ತ ₹11,500 ದೊರೆಯಲಿದೆ. ಇದರ ಜೊತೆಗೆ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹಧನವೂ ಸಿಗಲಿದೆ.

ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ₹1,000 ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ನಿವೃತ್ತಿ ಪರಿಹಾರ, ‘ಸಮಸ್ತ’ ಆ್ಯಪ್ ಬಳಕೆಗೆ ಮೊಬೈಲ್ ವಿತರಣೆ ಹಾಗೂ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಕಾರ್ಯಕರ್ತೆಯರಿಗೆ ಕನಿಷ್ಠ ಮೂರು ತಿಂಗಳ ಗೌರವಧನ ಸಹಿತ ರಜೆ ಸೇರಿದಂತೆ ಉಳಿದ ಬೇಡಿಕೆಗಳ ಕುರಿತು ಡಿಸೆಂಬರ್ 10ರೊಳಗೆ ಬೆಳಗಾವಿಯಲ್ಲಿ ಆರೋಗ್ಯ ಸಚಿವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ಘೋಷಿಸಿದ ಹೆಚ್ಚುವರಿ ₹1,500 ಪ್ರೋತ್ಸಾಹಧನ ಜಾರಿಗೂ ಸಂಘ ಒತ್ತಾಯಿಸಲಿದೆ. ಕೊರೆಯುವ ಚಳಿ, ಅನಾರೋಗ್ಯ ಹಾಗೂ ಕುಟುಂಬಗಳಿಂದ ದೂರವಿದ್ದು 13 ದಿನಗಳ ಕಾಲ ಹೋರಾಡಿದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿವಿಧ ಸಂಘಟನೆಗಳು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಕಲಾವಿದರು ಹಾಗೂ ಸಾರ್ವಜನಿಕರು ಬೆಂಬಲ ನೀಡಿದ್ದರು. ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಸಂಘದ ರಾಜ್ಯ ಉಪಾಧ್ಯಕ್ಷೆ ರಮಾ ಟಿ.ಸಿ. ಕೃತಜ್ಞತೆ ಸಲ್ಲಿಸಿದ್ದಾರೆ.

Author

ANU News

Follow Me
Other Articles
Previous

ಸೈದ್ಧಾಂತಿಕ ರಾಜಕಾರಣದಿಂದಷ್ಟೇ ಪ್ರಜಾಪ್ರಭುತ್ವದ ಉಳಿವು: ಬಿ.ಕೆ. ಹರಿಪ್ರಸಾದ್

Next

Karnataka ASHA Workers End 13-Day Protest After Govt Agrees to ₹11,500 Monthly Remuneration

Recent Posts

  • ಆನೆ ಸ್ಥಳಾಂತರ ಶಾಶ್ವತ ಪರಿಹಾರವಲ್ಲ; ವೈಜ್ಞಾನಿಕ ಕ್ರಮ ಅಗತ್ಯ: ಡಾ. ರವಿ ಸಿ.ಟಿ
  • Mohammed Shami’s Meeting with BJP Chief Nitin Nabin Triggers Political Speculation
  • Karnataka ASHA Workers End 13-Day Protest After Govt Agrees to ₹11,500 Monthly Remuneration
  • 13 ದಿನಗಳ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ; ಮಾಸಿಕ ಗೌರವಧನ ₹11,500ಕ್ಕೆ ಏರಿಕೆ!
  • ಸೈದ್ಧಾಂತಿಕ ರಾಜಕಾರಣದಿಂದಷ್ಟೇ ಪ್ರಜಾಪ್ರಭುತ್ವದ ಉಳಿವು: ಬಿ.ಕೆ. ಹರಿಪ್ರಸಾದ್
Copyright 2026 — ANU News. All rights reserved. Blogsy WordPress Theme