Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

IFFIಯಲ್ಲಿ ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣ ತೆರೆದಿಟ್ಟ ‘ಹನುಮಾನ್ ಅಂಶ’!

By ANU News
November 29, 2026 1 Min Read
Comments Off on IFFIಯಲ್ಲಿ ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣ ತೆರೆದಿಟ್ಟ ‘ಹನುಮಾನ್ ಅಂಶ’!

ಪಣಜಿ: 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ‘ಹನುಮಾನ್ ಅಂಶ’ ಚಿತ್ರವು ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಅನಾವರಣಗೊಳಿಸಿದೆ.

ಡಾ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಉತ್ತರ ಪ್ರದೇಶದಲ್ಲಿ ಜನಿಸಿದ ಲಕ್ಷ್ಮಿನಾರಾಯಣ ಅವರ ಜೀವನವನ್ನು ಆಧರಿಸಿದೆ. ಜೀವನ, ಸಾವು ಮತ್ತು ಮಾನವ ಸಂಕಟಗಳ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅವರು ಆಧ್ಯಾತ್ಮಿಕತೆಯತ್ತ ಸಾಗಿದ ಪಯಣವನ್ನು ಚಿತ್ರಿಸಲಾಗಿದೆ.

ಪತ್ರಿಕಾ ಮಾಹಿತಿ ಬ್ಯೂರೋ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚತುರ್ವೇದಿ, ತಮ್ಮ ತಾಯಿಯ ಪ್ರೇರಣೆಯಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನೈಜ ಜೀವನದ ಅನುಭವಗಳನ್ನು ಆಧರಿಸಿ ಕಥೆ ಹೇಳಲು ಆದ್ಯತೆ ನೀಡಿರುವುದಾಗಿ ತಿಳಿಸಿದರು.

ಸಾಮಾನ್ಯ ಮಧ್ಯಮ ಬಜೆಟ್ ಹಿಂದಿ ಚಿತ್ರದ ಸುಮಾರು ಹತ್ತನೇ ಒಂದು ಭಾಗದಷ್ಟು ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಆಧ್ಯಾತ್ಮಿಕ ಕಥಾವಸ್ತುವಿಗೆ ಹೊಂದುವಂತೆ ಸರಳ ನಿರೂಪಣಾ ಶೈಲಿ ಅನುಸರಿಸಲಾಗಿದೆ ಎಂದರು.

ಉತ್ತರ ಭಾರತದಲ್ಲಿ ಲಕ್ಷ್ಮಿನಾರಾಯಣ ನಡೆಸಿದ ಆಧ್ಯಾತ್ಮಿಕ ಪಯಣ ಮತ್ತು ನೀಮ್ ಕರೋಲಿ ಬಾಬಾ ಆಗಿ ರೂಪಾಂತರಗೊಂಡ ಕಥೆಯನ್ನು ಒಳಗೊಂಡ ಟ್ರೈಲಾಜಿಯ ಮೊದಲ ಭಾಗ ಇದಾಗಿದೆ. ಅವರ ಬೋಧನೆಗಳು ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಸೇರಿದಂತೆ ಜಗತ್ತಿನ ಹಲವರಿಗೆ ಸ್ಫೂರ್ತಿಯಾಗಿವೆ.

Author

ANU News

Follow Me
Other Articles
Previous

ಆಶಾ ಕಾರ್ಯಕರ್ತೆಯರ ಗೌರವಧನ ₹2,000 ಹೆಚ್ಚಳ, ಮಾಸಿಕ ₹10 ಸಾವಿರ ಖಚಿತ; ಯು.ಟಿ. ಖಾದರ್

Next

‘Hanuman Ansh’ Explores Neem Karoli Baba’s Spiritual Journey at 57th IFFI

Recent Posts

  • ₹1,800 ಕೋಟಿಯತ್ತ ‘ರಾಮಾಯಣ’; ಹೊಸ ಇತಿಹಾಸಕ್ಕೆ ಇನ್ನಷ್ಟು ಹತ್ತಿರ
  • ‘Hanuman Ansh’ Explores Neem Karoli Baba’s Spiritual Journey at 57th IFFI
  • IFFIಯಲ್ಲಿ ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣ ತೆರೆದಿಟ್ಟ ‘ಹನುಮಾನ್ ಅಂಶ’!
  • ಆಶಾ ಕಾರ್ಯಕರ್ತೆಯರ ಗೌರವಧನ ₹2,000 ಹೆಚ್ಚಳ, ಮಾಸಿಕ ₹10 ಸಾವಿರ ಖಚಿತ; ಯು.ಟಿ. ಖಾದರ್
  • Rishab Shetty Wins Best Actor Award for ‘Kantara: A Legend – Chapter 1’ at 57th IFFI
Copyright 2026 — ANU News. All rights reserved. Blogsy WordPress Theme