Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಬಗೆ ಬಗೆಯ ವಿಶ್ಲೇಷಣೆಗೆ ಹಾದಿಮಾಡಿಕೊಟ್ಟ ಸಮೀಕ್ಷೆಗಳು

By ANU News
April 30, 2026 1 Min Read
0

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಇದೀಗ ಫಲಿತಾಂಶಗಳ ಲೆಕ್ಕಾಚಾರ ಸಾಗಿದೆ. ಇದೇ ಸಂದರ್ಭದಲ್ಲಿ ಮತದಾನೋತ್ತರ ಫಲಿತಾಂಶಗಳು ಬಗೆ ಬಗೆಯ ವಿಶ್ಲೇಷಣೆಗೆ ಹಾದಿಮಾಡಿಕೊಟ್ಟಿದೆ.

ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಾಧ್ಯತೆಯ ಸುಳಿವು ನೀಡಿವೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಮುನ್ನಡೆಯ ಸಾಧ್ಯತೆಗಳಿವೆ ಎಂದು ಹಲವಾರು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆಯೇ ಎಂಬ ಚರ್ಚೆಗೂ ಸಮೀಕ್ಷೆಗಳು ಮುನ್ನುಡಿ ಬರೆದಿವೆ.

ಪುದುಚೇರಿಯಲ್ಲಿ ಎಐಎನ್ಆರ್‌ಸಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿವೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲುಗೈ ಸಾಧಿಸುವ ಸಾಧ್ಯಗಳತ್ತ ಸಮೀಕ್ಷೆಗಳು ಬೊಟ್ಟು ಮಾಡಿವೆ.

ಎಕ್ಸಿಟ್ ಪೋಲ್ ಅಂಕಿ-ಅಂಶಗಳು ಏನು ಹೇಳುತ್ತವೆ?

ಅಸ್ಸಾಂ (126 ಸ್ಥಾನಗಳು | ಬಹುಮತ: 64)

Axis My India:
ಭಾರತೀಯ ಜನತಾ ಪಕ್ಷ (ಬಿಜೆಪಿ+) – 88-100
ಕಾಂಗ್ರೆಸ್+ – 24-36

People’s Pulse:
NDA – 68-72
ಕಾಂಗ್ರೆಸ್+ – 22-26

Matrize:
NDA – 85-95
ಕಾಂಗ್ರೆಸ್+ – 25-32

ಕೇರಳ (140 ಸ್ಥಾನಗಳು | ಬಹುಮತ: 71)

Axis My India:
ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) – 78-90
ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) – 49-62
NDA – 0-3

People’s Pulse:
UDF – 75-85
LDF – 55-65
NDA – 0-3

Matrize:
UDF – 70-75
LDF – 60-65
NDA – 3-5

ಪಶ್ಚಿಮ ಬಂಗಾಳ (294 ಸ್ಥಾನಗಳು | ಬಹುಮತ: 148)

People’s Pulse:
ತೃಣಮೂಲ ಕಾಂಗ್ರೆಸ್ (TMC) – 177-187
ಬಿಜೆಪಿ – 95-110
ಎಡರಂಗ – 0-1
ಕಾಂಗ್ರೆಸ್ – 1-3

Matrize:
ಬಿಜೆಪಿ – 146-161
TMC – 125-140

P-Mark:
ಬಿಜೆಪಿ – 150-175
TMC – 118-138

ತಮಿಳುನಾಡು (234 ಸ್ಥಾನಗಳು | ಬಹುಮತ: 118)

People’s Pulse:
ದ್ರಾವಿಡ ಮುನ್ನೇತ್ರ ಕಳಗಂ (DMK+) – 125-145
AIADMK-BJP – 65-80
TVK – 18-24

Matrize:
DMK-ಕಾಂಗ್ರೆಸ್ – 122-132
NDA – 87-100
TVK – 10-12

ಪುದುಚೇರಿ (30 ಸ್ಥಾನಗಳು)

Axis My India:
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) – 16-20
DMK-ಕಾಂಗ್ರೆಸ್ – 6-8
TVK – 2-4

Author

ANU News

Follow Me
Other Articles
Previous

Car Catches Fire on Expressway; Five of Family Burnt Alive

Next

‘Bhogi’ First Look: Anupama Parameswaran Impresses as Rural Sulochana

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ KSRTC ಬಸ್ ಸಂಚಾರ; ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ ಎಂದ ಜೆಡಿಎಸ್
    • BJP Alleges Irregularities in Voter List Revision, Targets Congress Over SIR Process
    • ಅಕ್ರಮ ವಲಸಿಗರು, ನುಸುಳುಕೋರರಿಗೆ ಮಣೆಹಾಕುತ್ತಿರುವ ಕಾಂಗ್ರೆಸ್‌ ಗೆ ಜನರಿಂದ ತಕ್ಕ ಪಾಠ; ಬಿಜೆಪಿ
    • Eight Killed in Separate Accidents in Andhra Pradesh and Telangana
    • ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ
    Copyright 2026 — ANU News. All rights reserved. Blogsy WordPress Theme