Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಆಶಾ ಕಾರ್ಯಕರ್ತೆಯರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾದ ಪ್ರತಿಭಟನಾ ಸಪ್ತಾಹ

By ANU News
October 13, 2026 1 Min Read
0

ಬೆಂಗಳೂರು: ಕನಿಷ್ಠ ₹15,000 ಮಾಸಿಕ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (AIUTUC) ನೇತೃತ್ವದಲ್ಲಿ ಅಕ್ಟೋಬರ್ 5ರಿಂದ 12ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ ನಡೆಸಲಾಯಿತು.

ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ ₹1,500 ಗೌರವಧನ ಹೆಚ್ಚಿಸಲಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸದಿರುವುದು ಆಶಾ ಕಾರ್ಯಕರ್ತೆಯರ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ಸಂಘದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹಧನ ಹಾಗೂ ಗೌರವಧನ ಸೇರಿಸಿ ಮಾಸಿಕ ₹15,000 ನೀಡಬೇಕು ಮತ್ತು ಬಾಕಿ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ಒದಗಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಆರ್‌ಸಿಎಚ್ ಪೋರ್ಟಲ್ ಮೂಲಕ ಕೆಲಸಕ್ಕೆ ಅನುಗುಣವಾಗಿ ಕೇಂದ್ರದ ಪ್ರೋತ್ಸಾಹಧನ ದೊರೆಯದಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕಫದ ಮಾದರಿ ತರಲು ಒತ್ತಾಯಿಸುವುದನ್ನು ತಡೆಯಬೇಕು ಹಾಗೂ ನಿಯಮವಿಲ್ಲದೆ ಜಿಪಿಎಸ್ ಸ್ಥಳದ ಮಾಹಿತಿ ದಾಖಲಿಸಲು ಒತ್ತಡ ಹೇರಬಾರದು ಎಂದು ಸಂಘವು ಮನವಿ ಮಾಡಿದೆ. ಗೌರವಧನವನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಾವತಿಸುವಂತೆಯೂ ಆಗ್ರಹಿಸಿದೆ.

ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ದೆಹಲಿಯಲ್ಲಿ ₹15,000ಕ್ಕೂ ಹೆಚ್ಚು ಮಾಸಿಕ ಗೌರವಧನ ನೀಡಲಾಗುತ್ತಿದೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಬಿಎ (ಬಿಬಿಎಂಪಿ) ಆಶಾ ಸಂಘದ ಜಿಲ್ಲಾ ಅಧ್ಯಕ್ಷೆ ರಮಾ ಟಿ.ಸಿ., ಜಿಲ್ಲಾ ಕಾರ್ಯದರ್ಶಿ ಪರಾನ, ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಹಾಗೂ ನೆಲಮಂಗಲ ತಾಲೂಕು ಕಾರ್ಯದರ್ಶಿ ವೀಣಾ ಭಾಗವಹಿಸಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸಂಘಟನೆ ಎಚ್ಚರಿಸಿದೆ.

Author

ANU News

Follow Me
Other Articles
Previous

ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026

Next

ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಭಾರತ–ಯುಕೆ ವ್ಯಾಪಾರ ಸಂಬಂಧ ವಿಸ್ತರಣೆಗೆ ಜೆಟ್ಕೊ ಸಭೆಯಲ್ಲಿ ಒತ್ತು
    • ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ
    • ಆಶಾ ಕಾರ್ಯಕರ್ತೆಯರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾದ ಪ್ರತಿಭಟನಾ ಸಪ್ತಾಹ
    • ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026
    • ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್‌ನ ತೀರ್ಪು ಬಗ್ಗೆ ಸಿದ್ದರಾಮಯ್ಯ ಅಸಮಾಧಾನ
    Copyright 2026 — ANU News. All rights reserved. Blogsy WordPress Theme