Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ರೈಲ್ವೆ ಮಲ್ಟಿಟ್ರ್ಯಾಕಿಂಗ್‌ಗೆ ₹10,021 ಕೋಟಿ; ಕರ್ನಾಟಕಕ್ಕೆ ಬಂಪರ್, ವೈಟ್‌ಫೀಲ್ಡ್–ಬಂಗಾರಪೇಟೆ ಮತ್ತು ಹೊಸೂರು–ಓಮಲೂರು ಮಾರ್ಗಗಳ ಅಭಿವೃದ್ಧಿ

By ANU News
September 9, 2026 1 Min Read
0

ನವದೆಹಲಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಸರ್ಕಾರ ₹10,021 ಕೋಟಿ ವೆಚ್ಚದ ಐದು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಬುಧವಾರ ಅನುಮೋದನೆ ನೀಡಿದೆ. ಇದರಿಂದ ಒಟ್ಟು 540 ಕಿ.ಮೀ. ರೈಲು ಮಾರ್ಗ ಸೇರ್ಪಡೆಯಾಗಲಿದ್ದು, ಕರ್ನಾಟಕಕ್ಕೆ 194 ಕಿ.ಮೀ. ಮಾರ್ಗದ ಎರಡು ಯೋಜನೆಗಳು ದೊರೆಯಲಿವೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2029-30ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕರ್ನಾಟಕದ ಎರಡು ಯೋಜನೆಗಳು

ಕರ್ನಾಟಕದಲ್ಲಿ ವೈಟ್‌ಫೀಲ್ಡ್–ಬಂಗಾರಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ 47 ಕಿ.ಮೀ. ಹಾಗೂ ಹೊಸೂರು–ಓಮಲೂರು ಮಲ್ಟಿಟ್ರ್ಯಾಕಿಂಗ್ ಯೋಜನೆ 147 ಕಿ.ಮೀ. ಉದ್ದವಿದೆ. ದಟ್ಟಣೆಯನ್ನು ಕಡಿಮೆ ಮಾಡಿ ರೈಲು ಸಂಚಾರದ ವೇಗ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಈ ಕಾಮಗಾರಿಗಳು ನೆರವಾಗಲಿವೆ.

ಉಳಿದ ಯೋಜನೆಗಳಲ್ಲಿ ಅರಕ್ಕೋಣಂ–ರೇಣಿಗುಂಟ 77 ಕಿ.ಮೀ. ಮೂರನೇ ಮತ್ತು ನಾಲ್ಕನೇ ಮಾರ್ಗ, ಸೇಲಂ–ಕರೂರ್–ದಿಂಡಿಗಲ್ 159 ಕಿ.ಮೀ. ದ್ವಿಗುಣ ಮಾರ್ಗ ಹಾಗೂ ಸಿಕಂದರಾಬಾದ್‌ (ಘಾಟ್ಕೇಸರ್)–ಕಾಜಿಪೇಟೆ 110 ಕಿ.ಮೀ. ಮಲ್ಟಿಟ್ರ್ಯಾಕಿಂಗ್ ಕಾಮಗಾರಿಗಳು ಸೇರಿವೆ.

ಯೋಜನೆಗಳು ಒಟ್ಟು 17 ಜಿಲ್ಲೆಗಳು ಮತ್ತು ಸುಮಾರು 2,121 ಗ್ರಾಮಗಳನ್ನು ಒಳಗೊಂಡಿದ್ದು, ಸುಮಾರು 52 ಲಕ್ಷ ಜನರಿಗೆ ರೈಲು ಸಂಪರ್ಕ ಸುಧಾರಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತಿರುಪತಿ, ತಿರುತ್ತಣಿ, ಕೋಲಾರ ಚಿನ್ನದ ಗಣಿ, ಹೊಗೆನಕಲ್‌, ಹೊಸೂರು, ಕೊಡೈಕನಾಲ್‌, ಸತ್ಯಮಂಗಲಂ, ನಾಮಕ್ಕಲ್‌, ಯಾದಗಿರಿಗುಟ್ಟ ಮತ್ತು ಭೋಂಗಿರ್‌ ಸೇರಿದಂತೆ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳ ಸಂಪರ್ಕವೂ ಸುಧಾರಿಸಲಿದೆ.

ಕಲ್ಲಿದ್ದಲು, ಸಿಮೆಂಟ್‌, ಕಬ್ಬಿಣ–ಉಕ್ಕು, ಕಂಟೇನರ್‌, ಆಟೋಮೊಬೈಲ್‌, ಆಹಾರ ಧಾನ್ಯ, ಪೆಟ್ರೋಲಿಯಂ ಉತ್ಪನ್ನ ಮತ್ತು ರಸಗೊಬ್ಬರ ಸಾಗಣೆಗೆ ಈ ಮಾರ್ಗಗಳು ಪ್ರಮುಖವಾಗಿವೆ. ಹೆಚ್ಚುವರಿ ರೈಲು ಸಾಮರ್ಥ್ಯದಿಂದ ವಾರ್ಷಿಕ ಸುಮಾರು 4.7 ಕೋಟಿ ಟನ್‌ ಸರಕು ಸಾಗಣೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಅಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ರೈಲು ಜಾಲ ವಿಸ್ತರಣೆಯಿಂದ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದ್ದು, ವರ್ಷಕ್ಕೆ ಸುಮಾರು 8 ಕೋಟಿ ಲೀಟರ್‌ ತೈಲ ಆಮದು ಉಳಿತಾಯ ಹಾಗೂ 42 ಕೋಟಿ ಕೆ.ಜಿ. ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸುವಿಕೆ ಕಡಿತವಾಗಲಿದೆ ಎಂದು ಕೇಂದ್ರ ತಿಳಿಸಿದೆ.

Author

ANU News

Follow Me
Other Articles
Previous

Railways get ₹10,021-crore push: 540-km multitracking projects approved across south India

Next

Centre plans tough new seed law; Shivraj Singh Chouhan to consult farmer leaders on September 10

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Prashanth Neel-presented horror film ‘418’ gets A certificate after CBFC raises concerns over scary scenes
    • Kareena Kapoor flags Bollywood’s lack of originality, says hit formulas won’t make great films
    • ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್
    • ಬಾಲಿವುಡ್‌ ವಿರುದ್ಧ ಕರೀನಾ ಕಪೂರ್‌ ಅಸಮಾಧಾನ
    • SC rejects Abu Salem’s plea for early release, says 25 years complete in 2030
    Copyright 2026 — ANU News. All rights reserved. Blogsy WordPress Theme