Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

SIR ಮೂಲಕ ರಾಜ್ಯದಲ್ಲಿ 84.31 ಲಕ್ಷ ಅನುಮಾನಾಸ್ಪದ ಮತದಾರರು ಪತ್ತೆ: ಆಗಸ್ಟ್ 8ರೊಳಗೆ ಫಾರಂ ಸಲ್ಲಿಸಲು ಅವಕಾಶ

By ANU News
July 29, 2026 1 Min Read
0

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ 84,31,612 ಅನುಮಾನಾಸ್ಪದ ಮತದಾರರನ್ನು (ASDDO) ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ವಿತರಿಸಲಾದ 5,54,32,314 ಎನ್ಯುಮರೇಷನ್ ಫಾರಂಗಳ ಪೈಕಿ 4,26,75,861 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಶೇ.76.99ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಪರಿಶೀಲನೆಯಲ್ಲಿ 11,61,231 ಮತದಾರರು ನಾಪತ್ತೆ, 51,74,968 ಮಂದಿ ಶಾಶ್ವತವಾಗಿ ಸ್ಥಳಾಂತರ, 14,99,799 ಮಂದಿ ಮೃತಪಟ್ಟಿರುವುದು, 5,62,572 ದ್ವಿ-ಮತದಾರರು ಹಾಗೂ 33,042 ಇತರೆ ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.

ಮತದಾರರು ಗೈರುಹಾಜರಾಗಿರುವುದು ಅಥವಾ ಸ್ಥಳಾಂತರಗೊಂಡಿರುವುದಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರ್ ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹೆಸರು ಕೈಬಿಟ್ಟಿರುವ ಅರ್ಹ ಮತದಾರರು ಆನ್‌ಲೈನ್ ಅಥವಾ ಫಾರ್ಮ್-6 ಮೂಲಕ ಮರು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಇನ್ನೂ 43,24,847 ಎನ್ಯುಮರೇಷನ್ ಫಾರಂಗಳು ಸಾರ್ವಜನಿಕರಿಂದ ವಾಪಸ್ ಬರಬೇಕಿದ್ದು, ಅವುಗಳನ್ನು ಆಗಸ್ಟ್ 8ರೊಳಗೆ ಬಿಎಲ್‌ಒಗಳಿಗೆ ಸಲ್ಲಿಸುವಂತೆ ಮನವಿ ಮಾಡಿದರು. ಕುಟುಂಬದ ಸದಸ್ಯರೂ ಸಹಿ ಮಾಡಿ ಫಾರಂ ಸಲ್ಲಿಸಬಹುದಾಗಿದೆ. 2026ರ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಹೊಸ ಮತದಾರರು ಫಾರ್ಮ್-6 ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬೃಹತ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1,03,88,363 ಮತದಾರರಿದ್ದು, ಅವರಲ್ಲಿ 39,38,202 ASDDO ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, 16,57,582 ಫಾರಂಗಳು ಇನ್ನೂ ಡಿಜಿಟಲೀಕರಣಗೊಳ್ಳಬೇಕಿದ್ದು, ASDDO ಪ್ರಮಾಣ ಹೆಚ್ಚಿರುವ ಪ್ರದೇಶಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.

Author

ANU News

Follow Me
Other Articles
Previous

Bill making insult to ‘Vande Mataram’ a criminal offence passed in Rajya Sabha

Next

ಕಾವೇರಿ ವಿವಾದ; CWRC ನಿರ್ದೇಶನ ಅವೈಜ್ಞಾನಿಕ ಎಂದ ಹೆಚ್ಡಿಕೆ, ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮಾತೃಭಾಷಾ ಶಿಕ್ಷಣಕ್ಕೆ ಕೇಂದ್ರದ ಒತ್ತು: ಬಹುಭಾಷಾ ಕಲಿಕಾ ಸಂಪನ್ಮೂಲಗಳನ್ನು ವಿಸ್ತರಿಸಿದ NCERT
    • NCERT expands multilingual learning resources as Centre promotes mother tongue-based education
    • SIR: ಅರ್ಹ ಮತದಾರರ ಹಕ್ಕು ರಕ್ಷಿಸಲು ಆಯೋಗಕ್ಕೆ MLC ರಮೇಶ್ ಬಾಬು ಆಗ್ರಹ
    • ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಶಿಫಾರಸು: ಚಾಂಡಿ ಓಮನ್
    • Nearly 9.67 lakh SC students received post-matric scholarships in Tamil Nadu in 2025-26: Centre
    Copyright 2026 — ANU News. All rights reserved. Blogsy WordPress Theme