Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026; ವಿಕಸಿತ ಭಾರತ, ಹಿಂದುತ್ವ, ಸಾಮಾಜಿಕ ಏಕತೆ ಕುರಿತು ಚರ್ಚೆ

By ANU News
November 30, 2026 2 Min Read
Comments Off on ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026; ವಿಕಸಿತ ಭಾರತ, ಹಿಂದುತ್ವ, ಸಾಮಾಜಿಕ ಏಕತೆ ಕುರಿತು ಚರ್ಚೆ

ಬೆಂಗಳೂರು: ಬರಹಗಾರರು ಕೇವಲ ಪ್ರತಿಕ್ರಿಯಾತ್ಮಕ ಮತ್ತು ಭಾವುಕ ಬರವಣಿಗೆಗೆ ಸೀಮಿತವಾಗದೆ, ಆಳವಾದ ಅಧ್ಯಯನ ಹಾಗೂ ಸೃಜನಾತ್ಮಕ ಚಿಂತನೆಯ ಮೂಲಕ ಸಮಾಜದ ಹೃದಯ ಗೆಲ್ಲಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ಡಾ. ಜಿ.ಬಿ. ಹರೀಶ್ ಹೇಳಿದರು.

ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಸಂವಾದ ಕೇಂದ್ರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ವಿಭಾಗ ಆಯೋಜಿಸಿದ್ದ ಐದನೇ ವರ್ಷದ ‘ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026’ ಉದ್ಘಾಟನಾ ಅವಧಿಯಲ್ಲಿ ‘ಹಿಂದುತ್ವ-ಸಮಕಾಲೀನ ಚರ್ಚೆಗಳು’ ವಿಷಯವಾಗಿ ಅವರು ಮಾತನಾಡಿದರು. ಹಿಂದುತ್ವವನ್ನು ರಾಜಕೀಯದ ಚೌಕಟ್ಟಿನಲ್ಲಿ ಸೀಮಿತಗೊಳಿಸದೆ, ಅದರ ಸಾಂಸ್ಕೃತಿಕ ಬೇರುಗಳಾದ ಪುರಾಣ, ಜೈನ ಮತ್ತು ವಚನ ಸಾಹಿತ್ಯ, ಯಕ್ಷಗಾನ ಸೇರಿದಂತೆ ಭಾರತೀಯ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು.

ಹಿರಿಯ ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್ ಮಾತನಾಡಿ, ಬರವಣಿಗೆಗೆ ಶಿಸ್ತು, ಅಧ್ಯಯನ ಮತ್ತು ಸ್ವತಂತ್ರ ಚಿಂತನೆ ಅಗತ್ಯ. ಭಾವುಕತೆ ಶಕ್ತಿಯಾಗಬೇಕೇ ಹೊರತು ದೌರ್ಬಲ್ಯವಾಗಬಾರದು ಎಂದರು.

ಎರಡನೇ ಅವಧಿಯಲ್ಲಿ ಎಐ ಯುಗದ ಅಂಕಣ ಬರವಣಿಗೆ ಕುರಿತು ಮಾತನಾಡಿದ ಪ್ರಶಾಂತ್ ನಾತು, ಕೃತಕ ಬುದ್ಧಿಮತ್ತೆ ಬರವಣಿಗೆಯ ವೇಗ ಹೆಚ್ಚಿಸಿದರೂ ಬರಹಗಾರನ ಸ್ವಂತ ಚಿಂತನೆ, ಕ್ಷೇತ್ರಾನುಭವ ಮತ್ತು ಆಳವಾದ ಓದಿಗೆ ಪರ್ಯಾಯವಲ್ಲ ಎಂದರು. ಹಿರಿಯ ಪತ್ರಕರ್ತ ರಾಜೀವ್ ಹೆಗಡೆ ಮಾತನಾಡಿ, ಭವಿಷ್ಯದಲ್ಲಿ ಪತ್ರಿಕೋದ್ಯಮ ಎಐ ಮತ್ತು ಮಾನವೀಯ ಪತ್ರಿಕೋದ್ಯಮ ಎಂಬ ಎರಡು ಹಾದಿಗಳಲ್ಲಿ ಸಾಗಲಿದೆ. ಸೃಜನಶೀಲತೆ ಮತ್ತು ವೈಯಕ್ತಿಕ ಅನುಭವಗಳಿಗೆ ಎಐ ಪರ್ಯಾಯವಾಗಲಾರದು ಎಂದು ಹೇಳಿದರು.

ಮೂರನೇ ಅವಧಿಯಲ್ಲಿ ‘ವಿಕಸಿತ ಭಾರತ-2047’ ಕುರಿತು ಚರ್ಚೆ ನಡೆಯಿತು. ಡಾ. ವಿಶ್ವನಾಥ ಸುಂಕಸಾಳ ಮಾತನಾಡಿ, ಭೌತಿಕ ಅಭಿವೃದ್ಧಿಯ ಜತೆಗೆ ಸಂಸ್ಕೃತಿ, ನೈತಿಕತೆ, ಶಿಕ್ಷಣ ಮತ್ತು ಆತ್ಮತೃಪ್ತಿಗೂ ಆದ್ಯತೆ ನೀಡಬೇಕು ಎಂದರು. ಐಟಿ ತಜ್ಞ ಕಿರಣ್ ಕೆ.ಎಸ್. ಉತ್ಪಾದನಾ ವಲಯದ ಬೆಳವಣಿಗೆ, ತಂತ್ರಜ್ಞಾನ ಬಳಕೆ, ರೈತರ ಆದಾಯ ಹೆಚ್ಚಳ ಹಾಗೂ ಉಚಿತ ಯೋಜನೆಗಳಿಗೆ ಮಿತಿ ವಿಧಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ನಾಲ್ಕನೇ ಅವಧಿಯಲ್ಲಿ ನಾರಾಯಣ ಶೇವಿರೆ ಶಕ್ತಿ ಮತ್ತು ಸಂಸ್ಕೃತಿಯ ಸಮನ್ವಯದಿಂದ ವಿಶ್ವ ಏಕತೆ ಸಾಧ್ಯ ಎಂದರು. ಡಾ. ಮಾಲಿನಿ ಭಟ್ಟಾಚಾರ್ಯ ಭಿನ್ನ ಅಭಿಪ್ರಾಯಗಳಿಗೂ ಗೌರವ ನೀಡಿ ಮುಕ್ತ ಸಂವಾದ ನಡೆಸುವಂತೆ ಬರಹಗಾರರಿಗೆ ಕರೆ ನೀಡಿದರು.

ಸಮಾರೋಪದಲ್ಲಿ ಹಿರಿಯ ಪತ್ರಕರ್ತ ದು. ಗು. ಲಕ್ಷ್ಮಣ ಮಾತನಾಡಿ, ಅಂಕಣ ಬರವಣಿಗೆಗೆ ನಿರಂತರ ಅಧ್ಯಯನ, ಅನುಭವ ಮತ್ತು ಭಾಷೆಯ ಮೇಲಿನ ಹಿಡಿತ ಅಗತ್ಯ. ಟೀಕೆಗಳಿಗೆ ಹೆದರದೆ, ಹೊಗಳಿಕೆಗೆ ಹಿಗ್ಗದೆ ಜನಜೀವನದ ಸಮಸ್ಯೆಗಳ ಕುರಿತು ಬರೆಯಬೇಕು ಎಂದರು.

ಸಮಾವೇಶದಲ್ಲಿ ವಿವಿಧೆಡೆಯ ಅಂಕಣಕಾರರು, ಪತ್ರಕರ್ತರು ಮತ್ತು ಬರಹಗಾರರು ಪಾಲ್ಗೊಂಡಿದ್ದರು.

Author

ANU News

Follow Me
Other Articles
Previous

Experts Debate Hindutva and Viksit Bharat 2047 at Bengaluru Writers’ Convention

Next

ಬೈಂದೂರು ಬಿಜೆಪಿ ಯುವಮೋರ್ಚಾದಿಂದ ‘ಗೋವಿಗಾಗಿ ಮೇವು’ ಸೇವಾ ಕಾರ್ಯ; ಗೋಶಾಲೆಗಳಿಗೆ ಹಸ್ತಾಂತರ

Recent Posts

  • ಉಡುಪಿ ಸೋದೆ ಮಠದ ‘ಕದಳೀ ವಿಶ್ವದರ್ಶನ’: ಬಾಳೆ ಮುಹೂರ್ತ ಕೃಷಿ, ಸಂಸ್ಕೃತಿ, ಜ್ಞಾನದ ಮಹಾಸಂಗಮ ಎಂದ ಹೆಚ್.ಡಿ. ಕುಮಾರಸ್ವಾಮಿ
  • ಬೈಂದೂರು ಬಿಜೆಪಿ ಯುವಮೋರ್ಚಾದಿಂದ ‘ಗೋವಿಗಾಗಿ ಮೇವು’ ಸೇವಾ ಕಾರ್ಯ; ಗೋಶಾಲೆಗಳಿಗೆ ಹಸ್ತಾಂತರ
  • ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026; ವಿಕಸಿತ ಭಾರತ, ಹಿಂದುತ್ವ, ಸಾಮಾಜಿಕ ಏಕತೆ ಕುರಿತು ಚರ್ಚೆ
  • Experts Debate Hindutva and Viksit Bharat 2047 at Bengaluru Writers’ Convention
  • ನಿತಿನ್ ನಬಿನ್ ಭೇಟಿಯಾದ ಕೆಮತ್ತೋಬ್ಬ ಕ್ರಿಕೆಟಿಗ; ಬಿಜೆಪಿ ಸೇರುತ್ತಾರ ಶಮಿ?
Copyright 2026 — ANU News. All rights reserved. Blogsy WordPress Theme