Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬೈಂದೂರು ಬಿಜೆಪಿ ಯುವಮೋರ್ಚಾದಿಂದ ‘ಗೋವಿಗಾಗಿ ಮೇವು’ ಸೇವಾ ಕಾರ್ಯ; ಗೋಶಾಲೆಗಳಿಗೆ ಹಸ್ತಾಂತರ

By ANU News
November 30, 2026 1 Min Read
Comments Off on ಬೈಂದೂರು ಬಿಜೆಪಿ ಯುವಮೋರ್ಚಾದಿಂದ ‘ಗೋವಿಗಾಗಿ ಮೇವು’ ಸೇವಾ ಕಾರ್ಯ; ಗೋಶಾಲೆಗಳಿಗೆ ಹಸ್ತಾಂತರ

ಉಡುಪಿ: ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ‘ಗೋವಿಗಾಗಿ ಮೇವು’ ಅಭಿಯಾನ ಯಶಸ್ವಿಯಾಗಿ ನೆರವೇರಿತು.

ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಗೋವುಗಳಿಗಾಗಿ ಹಸಿರು ಮೇವು ಹಾಗೂ ಒಣ ಹುಲ್ಲು ಸಂಗ್ರಹಿಸಲಾಯಿತು. ಬಳಿಕ ಸಂಗ್ರಹಿಸಿದ ಮೇವನ್ನು ಬೈಂದೂರು ತಾಲೂಕಿನ ವಸ್ರೆಯ ‘ಗಂಟಿಧಾಮ’ ಮತ್ತು ಯಡ್ತರೆಯ ‘ಪುಣ್ಯಕೋಟಿ ಧಾಮ’ ಗೋಶಾಲೆಗಳಿಗೆ ಹಸ್ತಾಂತರಿಸಲಾಯಿತು.

ಮೂಕಪ್ರಾಣಿಗಳ ಹಸಿವು ನೀಗಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಸೇವಾ ಕಾರ್ಯದಲ್ಲಿ ಯುವಮೋರ್ಚಾ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಮರವಂತೆ, ಯುವಮೋರ್ಚಾ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅಜ್ರಿ, ಗೋಪಾಲ್ ಪೂಜಾರಿ ವಸ್ರೆ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ನಾವುಂದ, ಜಯಂತ್ ಶೇರುಗಾರ್, ಶೇಖರ್ ಖಾರ್ವಿ ಕಿರಿಮಂಜೇಶ್ವರ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026; ವಿಕಸಿತ ಭಾರತ, ಹಿಂದುತ್ವ, ಸಾಮಾಜಿಕ ಏಕತೆ ಕುರಿತು ಚರ್ಚೆ

Next

ಉಡುಪಿ ಸೋದೆ ಮಠದ ‘ಕದಳೀ ವಿಶ್ವದರ್ಶನ’: ಬಾಳೆ ಮುಹೂರ್ತ ಕೃಷಿ, ಸಂಸ್ಕೃತಿ, ಜ್ಞಾನದ ಮಹಾಸಂಗಮ ಎಂದ ಹೆಚ್.ಡಿ. ಕುಮಾರಸ್ವಾಮಿ

Recent Posts

  • ಉಡುಪಿ ಸೋದೆ ಮಠದ ‘ಕದಳೀ ವಿಶ್ವದರ್ಶನ’: ಬಾಳೆ ಮುಹೂರ್ತ ಕೃಷಿ, ಸಂಸ್ಕೃತಿ, ಜ್ಞಾನದ ಮಹಾಸಂಗಮ ಎಂದ ಹೆಚ್.ಡಿ. ಕುಮಾರಸ್ವಾಮಿ
  • ಬೈಂದೂರು ಬಿಜೆಪಿ ಯುವಮೋರ್ಚಾದಿಂದ ‘ಗೋವಿಗಾಗಿ ಮೇವು’ ಸೇವಾ ಕಾರ್ಯ; ಗೋಶಾಲೆಗಳಿಗೆ ಹಸ್ತಾಂತರ
  • ಅಂಕಣಕಾರರು ಮತ್ತು ಲೇಖಕರ ಸಮಾವೇಶ-2026; ವಿಕಸಿತ ಭಾರತ, ಹಿಂದುತ್ವ, ಸಾಮಾಜಿಕ ಏಕತೆ ಕುರಿತು ಚರ್ಚೆ
  • Experts Debate Hindutva and Viksit Bharat 2047 at Bengaluru Writers’ Convention
  • ನಿತಿನ್ ನಬಿನ್ ಭೇಟಿಯಾದ ಕೆಮತ್ತೋಬ್ಬ ಕ್ರಿಕೆಟಿಗ; ಬಿಜೆಪಿ ಸೇರುತ್ತಾರ ಶಮಿ?
Copyright 2026 — ANU News. All rights reserved. Blogsy WordPress Theme