Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home

ನವದೆಹಲಿ: ರಕ್ಷಣಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಉತ್ತೇಜನ ನೀಡುವಂತೆ, ಮಾನವರಹಿತ ವೈಮಾನಿಕ ವಾಹನದಿಂದ ಉಡಾಯಿಸಬಹುದಾದ ನಿಖರ ಮಾರ್ಗದರ್ಶಿತ ಕ್ಷಿಪಣಿ ‘ಯುಎಲ್‌ಪಿಜಿಎಂ-ವಿ3’ಯ ಅಂತಿಮ ಅಭಿವೃದ್ಧಿ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಆಂಧ್ರಪ್ರದೇಶದ ಕರ್ನೂಲ್ ಸಮೀಪದ ಡಿಆರ್‌ಡಿಒ ಪರೀಕ್ಷಾ ವಲಯದಲ್ಲಿ ಈ ಪ್ರಯೋಗಗಳು ನಡೆದವು. ಕ್ಷಿಪಣಿ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸಲು ಸುಧಾರಿತ ಸಂಯೋಜಿತ ಭೂ ನಿಯಂತ್ರಣ ವ್ಯವಸ್ಥೆಯನ್ನು ಬಳಸಲಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ.

ಈ ಅತ್ಯಾಧುನಿಕ ವ್ಯವಸ್ಥೆ ಉಡಾವಣಾ ಕಾರ್ಯಾಚರಣೆ ಮತ್ತು ಸಿದ್ಧತಾ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವ ಸಾಮರ್ಥ್ಯ ಹೊಂದಿದೆ.

ಹೈದರಾಬಾದ್‌ನ ರಿಸರ್ಚ್ ಸೆಂಟರ್ ಇಮಾರತ್ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು, ಡಿಆರ್‌ಡಿಎಲ್, ಟಿಬಿಆರ್‌ಎಲ್ ಹಾಗೂ ಹೆಮರ್ಲ್ ಸೇರಿದಂತೆ ಇತರ ಡಿಆರ್‌ಡಿಒ ಪ್ರಯೋಗಾಲಯಗಳೂ ಸಹಕಾರ ನೀಡಿವೆ.

ಕ್ಷಿಪಣಿ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಡಿಆರ್‌ಡಿಒ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಹಾಗೂ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಅಂಡ್ ಟೆಕ್ನಾಲಜೀಸ್ ಜೊತೆ ಕೈಜೋಡಿಸಿದೆ. ಬೆಂಗಳೂರು ಮೂಲದ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಯುಎವಿಗಳೊಂದಿಗೆ ಕ್ಷಿಪಣಿಯನ್ನು ಸಂಯೋಜಿಸಲಾಗಿದೆ.

Development trials of Unmanned Aerial Vehicle Launched Precision Guided Missile-V3 in Air-to-Ground & Air-to-Air modes was successfully completed at DRDO test range near Kurnool, Andhra Pradesh. pic.twitter.com/Hl3AuJhsMP

— DRDO (@DRDO_India) May 19, 2026

ಹಲವಾರು ಎಂಎಸ್‌ಎಂಇಗಳು ಮತ್ತು ಕೈಗಾರಿಕೆಗಳ ಸಹಕಾರದೊಂದಿಗೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಈ ಕ್ಷಿಪಣಿ ನಿರ್ಮಾಣಗೊಂಡಿದ್ದು, ಸರಣಿ ಉತ್ಪಾದನೆಗೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ, ರಕ್ಷಣಾ ಪಿಎಸ್‌ಯುಗಳು ಹಾಗೂ ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ. ‘ಆತ್ಮನಿರ್ಭರ ಭಾರತ’ ಗುರಿ ಸಾಧನೆಯಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಅವರು ಹೇಳಿದ್ದಾರೆ.

ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಕೂಡ ಯೋಜನೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದರು.

Author

ANU News

Follow Me
Other Articles
Previous

ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

Next

‘ಸಾಧನಾ ಸಮಾವೇಶ ಅಲ್ಲ, ವೈಫಲ್ಯೋತ್ಸವ’; ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme