Skip to content
ANU News
ANU News
  • Home
  • Home
ANU News
ANU News
  • Home
  • Home
ವಿದೇಶ

ಅಮೆರಿಕಾದಲ್ಲಿ ಮತ್ತೆ ಬಂದೂಕುದಾರಿಯ ಅಟ್ಟಹಾಸ; ಟೈಮ್ಸ್ ಸ್ಕ್ವೇರ್‌ನಲ್ಲಿ ರಾದ್ದಾಂತಕ್ಕೆ ಬೆಚ್ಚಿದ ಜನ

By Anu News
June 19, 2026 1 Min Read
0

ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಧ್ಯಾಹ್ನ ಸ್ಥಳೀಯ ಸಮಯ ಸುಮಾರು 3.40ರ ವೇಳೆಗೆ ನಡೆದ ದಾಳಿಯಿಂದ ಜನಸಂದಣಿಯಲ್ಲಿ ಭೀತಿ ಉಂಟಾಯಿತು. ಗುಂಡಿನ ಸದ್ದು ಕೇಳುತ್ತಿದ್ದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಸುರಕ್ಷಿತ ಸ್ಥಳಗಳತ್ತ ಓಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನ್ಯೂಯಾರ್ಕ್ ಅಗ್ನಿಶಾಮಕ ಇಲಾಖೆಯ ಮಾಹಿತಿ ಪ್ರಕಾರ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ನ್ಯೂಯಾರ್ಕ್ ನಿಕ್ಸ್ ತಂಡದ ಚಾಂಪಿಯನ್‌ಶಿಪ್ ಸಂಭ್ರಮಾಚರಣೆಯ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿರುವುದು ಗಮನಾರ್ಹ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಾದ್ಯಂತ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಘಟನಾ ಸ್ಥಳವನ್ನು ಪೊಲೀಸರು ಸುತ್ತುವರಿದು ತನಿಖೆ ನಡೆಸಿದ್ದು, ಕಪ್ಪು ಬಟ್ಟೆ ಧರಿಸಿದ್ದ ಕೆಲವರು ಗುಂಡು ಹಾರಿಸಿರುವ ದೃಶ್ಯಗಳು ಸಿಸಿಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ವೀಡಿಯೊಗಳಲ್ಲಿ ಸೆರೆಯಾಗಿವೆ.

ಇತ್ತೀಚೆಗಷ್ಟೇ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯಲ್ಲಿ 17 ವರ್ಷದ ಬಾಲಕ ಗಾಯಗೊಂಡಿದ್ದ ಬೆನ್ನಲ್ಲೇ ಮತ್ತೊಮ್ಮೆ ನಡೆದ ಈ ಘಟನೆ ನ್ಯೂಯಾರ್ಕ್ ನಗರದ ಭದ್ರತೆ ಕುರಿತ ಚರ್ಚೆಗೆ ಕಾರಣವಾಗಿದೆ.

🚨 BREAKING: CHAOS in Times Square after SHOTS FIRED just now

Ghetto wannabe “gangstas” have clearly been emboldened by their rampage after the Knicks game.

Now OPENING FIRE in the crossroads of the world in broad daylight.

Mamdani is a TOTAL failure.

All these World Cup… pic.twitter.com/zoNtXdVKx0

— Nick Sortor (@nicksortor) June 18, 2026

Author

Anu News

Follow Me
Other Articles
Previous

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ

Next

ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆರವು: ಅಮೆರಿಕ ಸೇನೆ ಘೋಷಣೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆರವು: ಅಮೆರಿಕ ಸೇನೆ ಘೋಷಣೆ
    • ಅಮೆರಿಕಾದಲ್ಲಿ ಮತ್ತೆ ಬಂದೂಕುದಾರಿಯ ಅಟ್ಟಹಾಸ; ಟೈಮ್ಸ್ ಸ್ಕ್ವೇರ್‌ನಲ್ಲಿ ರಾದ್ದಾಂತಕ್ಕೆ ಬೆಚ್ಚಿದ ಜನ
    • ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ
    • ಅಡ್ಡಮತದಾನ ಎಫೆಕ್ಟ್; ಯುವಕರಿಗೆ ಹೆಚ್ಚಿನ ಅವಕಾಶ ನೀಡಲು ಜೆಡಿಎಸ್ ನಿರ್ಧಾರ
    • ಧನುಷ್–ಮಮ್ಮೂಟ್ಟಿ ಅಭಿನಯದ ಚಿತ್ರಕ್ಕೆ ‘ಓಂ’ ಶೀರ್ಷಿಕೆ; ಅಕ್ಟೋಬರ್ 16ಕ್ಕೆ ತೆರೆಗೆ
    Copyright 2026 — ANU News. All rights reserved. Blogsy WordPress Theme