Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

1.14 ಕೋಟಿ ಗೃಹಲಕ್ಷ್ಮಿಯರ ₹5,000 ಕೋಟಿ ಎಲ್ಲಿದೆ? ಸಿದ್ದರಾಮಯ್ಯಗೆ ಪ್ರಶ್ನೆ

By Anu News
May 30, 2026 1 Min Read
0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಹೊಸ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ತಲುಪಬೇಕಿದ್ದ ₹5,000 ಕೋಟಿ ಹಣದ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸುರೇಶ್ ಕುಮಾರ್, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ 1.14 ಕೋಟಿ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎಂಬ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಈ ವಿಚಾರವನ್ನು ಸದನದ ಗಮನಕ್ಕೆ ತಂದಿದ್ದರು. ಆ ವೇಳೆ ಸರ್ಕಾರದ ಪರವಾಗಿ ಹಣ ಪಾವತಿಯಾಗಿರುವುದಾಗಿ ಹೇಳಲಾಗಿತ್ತಾದರೂ, ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂಬ ದಾಖಲೆಗಳನ್ನು ಮಂಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸುಮಾರು ₹5,000 ಕೋಟಿ ಮೊತ್ತದ ಹಣದ ಕುರಿತು ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ. ಐದು ತಿಂಗಳು ಕಳೆದರೂ ಹಣದ ಸ್ಥಿತಿಗತಿ ಏನು ಎಂಬುದು ಬಹಿರಂಗವಾಗಿಲ್ಲ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.

ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಹಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಸರ್ಕಾರ ಉತ್ತರದಾಯಿತ್ವ ಹೊಂದಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ 1.14 ಕೋಟಿ ಗೃಹಲಕ್ಷ್ಮಿಯರಿಗೆ ಸೇರಬೇಕಿದ್ದ ಹಣದ ಹಣೆಬರಹವೇನು ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Author

Anu News

Follow Me
Other Articles
Previous

Kharge Hails Siddaramaiah’s Legacy, Calls His Tenure a Reflection of Social Justice

Next

‘ಸಿದ್ದರಾಮಯ್ಯ ಅವರ ಆಡಳಿತ ಸಾಮಾಜಿಕ ನ್ಯಾಯದ ಪ್ರತಿಬಿಂಬ’; ಖರ್ಗೆ ಮೆಚ್ಚುಗೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Mandadi’ teaser out; Suri plays sailor in high-seas adventure
    • ‘ಮಂದಾಡಿ’ ಟೀಸರ್ ಬಿಡುಗಡೆ; ನಾವಿಕನಾಗಿ ಸೂರಿ, ಸಮುದ್ರದಲ್ಲಿ ಸಾಹಸ
    • Telangana bus crashes into container truck; 6 killed, 20 injured
    • ತೆಲಂಗಾಣದಲ್ಲಿ ಬಸ್-ಕಂಟೇನರ್ ಡಿಕ್ಕಿ, 6 ಮಂದಿ ಸಾವು, 20 ಜನರಿಗೆ ಗಾಯ
    • Karnataka minister B Nagendra likely to quit over Valmiki scam allegations
    Copyright 2026 — ANU News. All rights reserved. Blogsy WordPress Theme