Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಸವಾಲ್‌: ‘ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ’

By Anu News
September 3, 2026 1 Min Read
0

ಬೆಂಗಳೂರು: ಕೆಪಿಎಸ್‌ಸಿ ಹಗರಣದ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವ ಎನ್‌. ಚಲುವರಾಯಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಆರೋಪ-ಪ್ರತ್ಯಾರೋಪಗಳ ನಡುವೆ ಇದೀಗ ವೈಯಕ್ತಿಕ ವಿಚಾರಗಳೂ ಮುನ್ನೆಲೆಗೆ ಬಂದಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಕುಮಾರಸ್ವಾಮಿಗೆ ನೇರ ಚರ್ಚೆಗೆ ಬಹಿರಂಗ ಸವಾಲು ಹಾಕಿದ್ದಾರೆ. “ಧೈರ್ಯವಿದ್ದರೆ ವಿಧಾನಸೌಧದ 313 ಅಥವಾ 334ನೇ ಕೊಠಡಿಗೆ ಬನ್ನಿ. ಮಾಧ್ಯಮಗಳ ಎದುರೇ ಮುಖಾಮುಖಿ ಚರ್ಚೆ ಮಾಡೋಣ” ಎಂದು ಹೇಳಿದ್ದಾರೆ.

ಇದೇ ವೇಳೆ 2006ರ ರಾಜಕೀಯ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕಾಣೆಯಾಗಿದ್ದರು ಎಂದು ಆರೋಪಿಸಿದ್ದಾರೆ. ಆಗ ಅವರ ತಂದೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಮಗೆ ಕರೆ ಮಾಡಿ ಕುಮಾರಸ್ವಾಮಿಯನ್ನು ಹುಡುಕಿ ವಿಧಾನಸೌಧಕ್ಕೆ ಕರೆತರುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

“ಬೆಳಗ್ಗೆ 10 ಗಂಟೆಯೊಳಗೆ ಅವರನ್ನು ಪತ್ತೆಹಚ್ಚಿ ಕರೆತನ್ನಿ ಎಂದು ದೇವೇಗೌಡರು ಹೇಳಿದ್ದರು. ನಾನು ಬೆಳಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ” ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಅಂದು ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಚಾರದಲ್ಲಿ ಕುಮಾರಸ್ವಾಮಿಯವರನ್ನೇ ಕೇಳಬೇಕು ಎಂದು ತಿಳಿಸಿರುವ ಚಲುವರಾಯಸ್ವಾಮಿ, ಕೆಪಿಎಸ್‌ಸಿ ಹಗರಣದ ಕುರಿತು ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ನೇರ ಚರ್ಚೆಯಲ್ಲೇ ಉತ್ತರಿಸಲು ಸಿದ್ಧ ಎಂದು ಹೇಳಿದ್ದಾರೆ.

Author

Anu News

Follow Me
Other Articles
Previous

5.0-magnitude earthquake rattles Tibet-Nepal border region, no casualties reported

Next

‘Come for a direct debate’: Cheluvarayaswamy throws open challenge to Kumaraswamy

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Trump wants Strait of Hormuz renamed ‘Trump Strait’ amid US-Iran tensions
    • ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!
    • Janmashtami: Meat sale banned in Bengaluru on September 4
    • ಜನ್ಮಾಷ್ಟಮಿ ಹಿನ್ನೆಲೆ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ಬಂದ್!
    • Duniya Vijay-Nagarathna Marriage Ends: Karnataka HC Grants Divorce, Orders ₹2 Crore Alimony
    Copyright 2026 — ANU News. All rights reserved. Blogsy WordPress Theme