ರಾಖಿಗರ್ಹಿ ಅಸ್ಥಿಪಂಜರಗಳ ವೈಜ್ಞಾನಿಕ ಅಧ್ಯಯನಕ್ಕೆ ಚಾಲನೆ
ನವದೆಹಲಿ: ಹರಿಯಾಣದ ರಾಖಿಗರ್ಹಿ ಪುರಾತತ್ವ ತಾಣದಿಂದ ಪತ್ತೆಯಾದ ಮಾನವ ಅಸ್ಥಿಪಂಜರದ ಅವಶೇಷಗಳನ್ನು ಮುಂದುವರಿದ ವೈಜ್ಞಾನಿಕ ಅಧ್ಯಯನಕ್ಕಾಗಿ ಭಾರತೀಯ ಪುರಾತತ್ವ ಸಮೀಕ್ಷೆ (ASI) ಭಾರತದ ಮಾನವಶಾಸ್ತ್ರೀಯ ಸಮೀಕ್ಷೆ (AnSI)ಗೆ ಹಸ್ತಾಂತರಿಸಿದೆ. ಸಿಂಧೂ-ಸರಸ್ವತಿ ನಾಗರಿಕತೆಯ ಅತಿದೊಡ್ಡ ವಸಾಹತು ಎಂದು ಪರಿಗಣಿಸಲ್ಪಡುವ…
ಲಕ್ನೋ ಅಗ್ನಿ ದುರಂತ: ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು…
ಬಿಎಂಟಿಸಿ ಮಾಸಿಕ ಪಾಸ್ ದರ ಏರಿಕೆ ಇಲ್ಲ; ವಿಸ್ತಾರ ಮಾರ್ಗಗಳಿಗೆ ಮಾತ್ರ ಹೊಸ ಪಾಸ್
ಬೆಂಗಳೂರು: ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರವನ್ನು ಹೆಚ್ಚಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ನಗರ ಹೊರವಲಯದ ವಿಸ್ತರಿತ ಮಾರ್ಗಗಳಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಮಾತ್ರ ‘ಸಾಮಾನ್ಯ ವಿಸ್ತಾರ’ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್ಗಳನ್ನು ಪರಿಚಯಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಬಿಎಂಟಿಸಿ…
ಇರಾನ್ ಮೇಲಿನ ಕೆಲವು ನಿರ್ಬಂಧ ಸಡಿಲಿಕೆ; ತೈಲ ರಫ್ತಿಗೆ ಅಮೆರಿಕ ಅವಕಾಶ
ವಾಷಿಂಗ್ಟನ್: ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಅಮೆರಿಕ–ಇರಾನ್ ಶಾಂತಿ ಮಾತುಕತೆಗಳ ಬಳಿಕ ಅಮೆರಿಕ ಇರಾನ್ ಮೇಲಿನ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಿದೆ. ಅಮೆರಿಕ ಖಜಾನೆ ಇಲಾಖೆ ಹೊರಡಿಸಿದ ಆದೇಶದಂತೆ, ಇರಾನಿನ ಕಚ್ಚಾ ತೈಲ, ಪೆಟ್ರೋಕೆಮಿಕಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟ ಹಾಗೂ…
‘ಈ ದೇಶ ಈಗಾಗಲೇ ಹಿಂದೂ ರಾಷ್ಟ್ರವೇ ಆಗಿದೆ. ಕಾಂಗ್ರೆಸ್’ನವರಿಗೆ ಇದು ಗೊತ್ತಿಲ್ಲ’ ಎಂದ ಜೋಶಿ
ಬೆಂಗಳೂರು: ಆರ್ಎಸ್ಎಸ್ ಮತ್ತು ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿವೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ, “ಆರ್ಎಸ್ಎಸ್ ಮತ್ತು…
ಅಮೆರಿಕ–ಇರಾನ್ ಶಾಂತಿ ಮಾತುಕತೆ ಭಗ್ನ; ಸಭೆಯಿಂದ ದಿಢೀರ್ ನಿರ್ಗಮಿಸಿದ ನಿಯೋಗ
ಸ್ವಿಟ್ಜರ್ಲ್ಯಾಂಡ್: ಅಮೆರಿಕ ಮತ್ತು ಇರಾನ್ ನಡುವಿನ ಮಹತ್ವದ ಶಾಂತಿ ಮಾತುಕತೆ ಮೊದಲ ದಿನವೇ ಭಿನ್ನಾಭಿಪ್ರಾಯಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ಲೆಬನಾನ್ ಕದನ ವಿರಾಮ ಪ್ರಮುಖ ಚರ್ಚಾ…
ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ನಟ ಚೇತನ್ ಅಹಿಂಸ ಘೋಷಣೆ
ಬಾಗಲಕೋಟೆ: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಂದಿನ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಅಧಿಕೃತವಾಗಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಾದ್ಯಂತ ಸಾಮಾಜಿಕ ನ್ಯಾಯ, ದಲಿತರು,…
ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್? ‘ಉಯಿರ್’ನಲ್ಲಿ ಅತಿಥಿ ಪಾತ್ರ..!
ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಲಯಾಳಂ ಮಾಧ್ಯಮಗಳ ವರದಿಯಂತೆ, ಸುದೀಪ್ ಈಗಾಗಲೇ ಉಯಿರ್ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ‘ಉಯಿರ್’ ಒಂದು ಮರ್ಡರ್ ಮಿಸ್ಟರಿ…
ರಾಜ್ಯದ 13 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡಿನ ಒಟ್ಟು 13 ಜಿಲ್ಲೆಗಳಲ್ಲಿ ಭಾರಿ ಮಳೆಯ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ,…
ಡೀಸೆಲ್ ದರ ಏರಿಕೆ: ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಾಲ್ಕು ಸಾರಿಗೆ ನಿಗಮಗಳ ಮನವಿ
ಬೆಂಗಳೂರು: ಡೀಸೆಲ್ ದರ ಏರಿಕೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಹೊರೆಯಿಂದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಕೋರಿವೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ನಿಗಮಗಳು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ,…